

ಹರಪನಹಳ್ಳಿ: ಗುರುವಿನ ಆದೇಶ ಪಾಲಿಸುವ ಮೂಲಕ ಉನ್ನತ ಗುರಿ ಸಾಧಿಸಿ ಎಂದು ಸಾದು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಬಂದೋಳ ಮಂಜುನಾಥ್ ಹೇಳಿದರು.
ಇದನ್ನೂ ಓದಿ: ವೀರಶೈವ ಸಮಾಜದ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸಿ
ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಸಾದು ಲಿಂಗಾಯತ ನೌಕರರ ಬಳಗದಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುರು ಬೋಧಿಸುವ ಶಿಕ್ಷಣದಿಂದ ದೇಶದ ಪ್ರಗತಿ ನಿಂತಿದೆ.
ಅವರ ಮಾರ್ಗದರ್ಶನ ಪಡೆದು ಸಾಧಿಸುವ ವಿದ್ಯಾರ್ಥಿಗಳು ಬೆಳೆದುಬಂದ ಹಾದಿ, ತಂದೆ-ತಾಯಿ ಪರಿಶ್ರಮ ಮರೆಯಬಾರದು. ಹೆತ್ತವರನ್ನು ವೃದ್ಧಾಶ್ರಮಕ್ಕೆ ಕಳಿಸಬಾರದು ಎಂದು ಸಲಹೆ ನೀಡಿದರು.
ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್ ಮಂಜುನಾಥ, ನಿವೃತ್ತ ಶಿಕ್ಷಕ ಕೆ.ಬಸವರಾಜ್, ತರಳಬಾಳು ಮಠದ ವಿಶೇಷ ಅಧಿಕಾರಿ ವೀರಣ್ಣ ಎಸ್.ಜತ್ತಿ, ಸಮಾಜದ ತಾಲೂಕು ಅಧ್ಯಕ್ಷ ಡಾ.ಚೇತನ ಬಣಕಾರ, ಪ್ರಮುಖರಾದ ಬೇವಿನಹಳ್ಳಿ ಕೆಂಚನಗೌಡ, ಶೇಖರಗೌಡ ಪಾಟೀಲ್, ಎಚ್.ದೇವೇಂದ್ರಗೌಡ, ಎಸ್.ಮಂಜುನಾಥ, ಯಶವಂತಗೌಡ, ಎಸ್.ರಾಮಪ್ಪ, ರಾಜಶೇಖರ, ಚಂದ್ರಮೌಳಿ, ಸಿದ್ದಲಿಂಗನಗೌಡ, ಕಡಬಗೇರ್ ಸಿದ್ದೇಶ್, ಶಿವಕುಮಾರ್ ಇತರರಿದ್ದರು.