ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ಕಲಿಸಿ

SWAMY
ಕಾನಹೊಸಹಳ್ಳಿಯ ಮಾಡ್ಲಾಕನಹಳ್ಳಿಯಲ್ಲಿ ಶ್ರೀ ಕರಿಯಣ್ಣ ಸ್ವಾಮಿ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆ ಆಯೋಜಸಿದ್ದ ಧರ್ಮ ಸಭೆಯಲ್ಲಿ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಸ್ವಾಮೀಜಿ ಮಾತನಾಡಿದರು. ಪ್ರಮುಖರಾದ ಡಾ.ರೇವಯ್ಯ ಒಡೆಯರ್. ಕಾಕಿ ಬಸಣ್ಣ, ಮಾಜಿ ಜಿಪಂ ಸದಸ್ಯ ನರಸಿಂಹನಗಿರಿ ವೆಂಕಟೇಶ್, ಸಿದ್ದಾಪುರ ಅಂಜಿನಪ್ಪ ಇತರರಿದ್ದರು.
Published on

ಕಾನಹೊಸಹಳ್ಳಿ: ಗುರು-ಹಿರಿಯರನ್ನು ಗೌರವಿಸುವುದು, ಮಹಿಳೆಯರನ್ನು ಪೂಜ್ಯನೀಯವಾಗಿ ಕಾಣುವುದರಿಂದ ದೇಶಕ್ಕೆ ಉತ್ತಮ ಭವಿಷ್ಯವಿದೆ ಎಂದು ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು.

ದೇವಸ್ಥಾನ ಉದ್ಘಾಟನೆ

ಸಮೀಪದ ಮಾಡ್ಲಾಕನಹಳ್ಳಿಯಲ್ಲಿ ಆಯೋಜಿಸಿದ್ದ ಶ್ರೀ ಕರಿಯಣ್ಣ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ನಂತರ ನಡೆದ ಧರ್ಮಸಭೆಯಲ್ಲಿ ಸಾನ್ನಿಧ್ಯವಹಿಸಿ ಸೋಮವಾರ ಮಾತನಾಡಿದರು.

ಎಲ್ಲರೂ ಸಾಮರಸ್ಯದಿಂದ ಜೀವನ ನಡೆಸುವುದರ ಜತೆಗೆ ಸೇವಾ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನು ಕಲಿಸಬೇಕು. ಧಾರ್ಮಿಕ ಆಚರಣೆಯು ನಂಬಿಕೆಯಿಂದ ಕೂಡಿದೆ. ಎಲ್ಲರೂ ಉತ್ತಮರಾಗಿ ಬಾಳುವಂತಾಗಬೇಕು ಎಂದರು.

ವಿಧಾನಸೌಧದ ಕಾನೂನು ಇಲಾಖೆ ಸಂಶೋಧಕ ಡಾ.ರೇವಯ್ಯ ಒಡೆಯರ್ ಮಾತನಾಡಿ, ಹಳ್ಳಿಗಳಲ್ಲಿ ದೇವಸ್ಥಾನ ನಿರ್ಮಾಣದ ಮೂಲಕ ಎಲ್ಲರೂ ಧಾರ್ಮಿಕ ನಂಬಿಕೆಯ ಜತೆಗೆ ಸಹೋದರತ್ವದಿಂದ ಒಗ್ಗಟ್ಟಾಗಿ ಸಾಗಲು ಉತ್ತಮ ಸ್ಥಾನ ಸಿಕ್ಕಂತಾಗಿದೆ. ಮಠ-ಮಾನ್ಯಗಳ ಜತೆ ಜನರು ಸಂಪರ್ಕ ಹೊಂದುವ ಮೂಲಕ ಧರ್ಮ ಪಾಲಿಸುವುದು ನಮ್ಮೆಲ್ಲರ ಚಿತ್ತವಾಗಿರಲಿ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಪುರೋಹಿತರಿಂದ ಹೋಮ, ಹವನ, ಪೂಜಾ ವಿಧಿ ವಿಧಾನಗಳು ನೆರವೇರಿದವು. ಮಹಿಳೆಯರು ಪೂರ್ಣಕುಂಭ ಹೊತ್ತು ಉಜ್ಜಯಿನಿ ಶ್ರೀಗಳನ್ನು ಸ್ವಾಗತಿಸಿದರು. ಮಾಡ್ಲಾಕನಹಳ್ಳಿ ಸುತ್ತಲಿನ ಹಳ್ಳಿಗಳ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗುಂಡುಮುಣುಗು ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ಅಂಜಿನಪ್ಪ, ಜಿಪಂ ಮಾಜಿ ಸದಸ್ಯ ಎಸ್.ವೆಂಕಟೇಶ, ಎಪಿಎಂಸಿ ಮಾಜಿ ಅಧ್ಯಕ್ಷ ಉಜ್ಜಯಿನಿ ಲೋಕಪ್ಪ, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿ ಲಕ್ಕಜ್ಜಿ ಮಲ್ಲಿಕಾರ್ಜುನ, ಕನಕ ವಿದ್ಯಾಪೀಠದ ಕಾರ್ಯದರ್ಶಿ ತಾಯಕನಹಳ್ಳಿ ಬಿ.ಟಿ.ಮಂಜುನಾಥ, ಗ್ರಾಪಂ ಮಾಜಿ ಉಪಾಧ್ಯಕ್ಷ ಎಚ್.ಮಹಂತಪ್ಪ, ಗ್ರಾಪಂ ಸದಸ್ಯ ಜಿ.ಧನಂಜಯ ಗೌಡ, ಜೀವಪ್ರಕಾಶ, ಮುಖಂಡರಾದ ಎ.ಕೆ.ನಾಗರಾಜ, ಕಾಕಿ ಬಸಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net