More

    ಹೋಮ ಹವನದಿಂದ ಮನಸ್ಸಿಗೆ ನೆಮ್ಮದಿ | ಪ್ರಭು ಸಾರಂಗದೇವ ಶಿವಾಚಾರ್ಯರ ಹೇಳಿಕೆ

    ಕಲಕೇರಿ: ಪ್ರತಿಯೊಬ್ಬರೂ ಯಜ್ಞ ಹಾಗೂ ಚಂಡಿಯಾಗ ಕಾರ್ಯದಲ್ಲಿ ಭಾಗಿಯಾಗುವುದರಿಂದಾಗಿ ಮನಸ್ಸಿಗೆ ನೆಮ್ಮದಿ ಲಭಿಸುವ ಜತೆಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಸಿಂದಗಿಯ ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರು.

    ಗ್ರಾಮದ ಜೆ.ಜೆ. ಶಿಕ್ಷಣ ಸಂಸ್ಥೆ ಆವರಣದಲ್ಲಿ ಆದಿಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ ಸಮಿತಿ ಹಾಗೂ ಜಯಶಾಂತಲಿಂಗೇಶ್ವರ ಮಠದ ಸಹಯೋಗದಲ್ಲಿ 11 ದಿನಗಳವರೆಗೆ ಹಮ್ಮಿಕೊಂಡಿದ್ದ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಶನಿವಾರ ಬೆಳಗ್ಗೆ ಬೃಹತ್ ಯಜ್ಞ ಹಾಗೂ ಚಂಡಿಯಾಗ ಮಂಟಪ ಉದ್ಘಾಟಿಸಿ ಅವರು ಮಾತನಾಡಿದರು.

    ಕಂಪ್ಲಿಯ ಸಾಂಗತ್ರಯ ವೈದಿಕ ಪಾಠಶಾಲೆಯ ವೈದಿಕ ವೃಂದದಿಂದ ಗಂಗಾಪೂಜೆ, ಹೋಮ ಹವನಗಳು ನಡೆದವು. ಯಜ್ಞದಲ್ಲಿ ಅಂದಾಜು 200ಕ್ಕೂ ಹೆಚ್ಚು ದಂಪತಿ ಭಾಗಿಯಾಗಿದ್ದರು. ಮಧ್ಯಾಹ್ನ 3 ಗಂಟೆಗೆ ಡಾ. ವಿಶ್ವಾರಾಧ್ಯ ಶಿವಾಚಾರ್ಯರ ಪಾದಪೂಜೆಯೊಂದಿಗೆ ಚಂಡಿಯಾಗ ಕಾರ್ಯಕ್ರಮ ನಡೆಯಿತು.
    ಜಾಲಹಳ್ಳಿಯ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಶಿವಾಚಾರ್ಯರು, ಸಮ್ಮೇಳನಾಧ್ಯಕ್ಷ ಪದ್ಮಭಾಸ್ಕರ ನೀಲಕಂಠ ಶಿವಾಚಾರ್ಯರು, ಹಿರೂರಿನ ಜಯಸಿದ್ಧೇಶ್ವರ ಶಿವಾಚಾರ್ಯರು, ಕಲಕೇರಿ ಹಿರೇಮಠದ ಸಿದ್ಧರಾಮ ಶ್ರೀಗಳು, ಗದ್ದುಗೆಮಠದ ಮಡಿವಾಳೇಶ್ವರ ಶ್ರೀಗಳು, ಕಿರಣ ದೇವರು ಜಾಲಹಳ್ಳಿಮಠ, ಕಂಪ್ಲಿಯ ಪಂಡಿತ್ ಶಶಿಧರ ಶಾಸ್ತ್ರಿಗಳು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts