More

    ನಂದನಹೊಸೂರು ಕರಿಯಮ್ಮದೇವಿ ಗಂಗಾಪೂಜೆ


    ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ನಂದನಹೊಸೂರಿನ ಕರಿಯಮ್ಮದೇವಿ ದೇವಾಲಯದ ಪ್ರಾರಂಭೋತ್ಸವ ಹಾಗೂ ನೂತನ ವಿಗ್ರಹ ಪ್ರತಿಷ್ಠಾಪನೆ, ಗೋಪುರ ಕಳಸಾರೋಹಣ ಪ್ರತಿಷ್ಠಾಪನೆ ಅಂಗವಾಗಿ ಸೋಮವಾರ ನಾನಾ ಧಾರ್ಮಿಕ ವಿಧಿಗಳು ಶ್ರದ್ಧಾ ಭಕ್ತಿಗಳೊಂದಿಗೆ ನೆರವೇರಿದವು.

    ವಿವಿಧ ಗ್ರಾಮಗಳಿಂದ ದೇವರುಗಳು ಆಗಮಿಸಿದ್ದವು. ಹಿರೇಗುಂಟನೂರು ದ್ಯಾಮಲಾಂಭದೇವಿ, ಎಚ್‌ಡಿ ಪುರದ ಕಾಳಘಟ್ಟದ ಕರಿಯಮ್ಮ, ಮಲ್ಲಿಕಾರ್ಜುನ ಸ್ವಾಮಿ, ನಂ.ಗೊಲ್ಲರಹಟ್ಟಿಯ ರಂಗನಾಥ ಸ್ವಾಮಿ, ಜುಂಜಪ್ಪಸ್ವಾಮಿ, ಯುಪಿಹಳ್ಳಿಯ ಕೊಲ್ಲಾಪುರದಮ್ಮ ದೇವಿ, ಗೂಳಿಹೊಸಹಳ್ಳಿಯ ಬಸವಣ್ಣದೇವರು, ಚೌಡಗೊಂಡನಹಳ್ಳಿ ಪಾರ್ಥಲಿಂಗೇಶ್ವರಸ್ವಾಮಿ ಹಾಗೂ ದೊಡ್ಡಕಿಟ್ಟದಹಳ್ಳಿಯ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ನಡೆಯಿತು.

    ಮಧ್ಯಾಹ್ನ ಗಂಗಾಪೂಜೆ, ರಾತ್ರಿ ದುರ್ಗಿಹೋಮ ಮತ್ತು ಚಂಡಿ ಹೋಮ ನೆರವೇರಿತು. ರಾತ್ರಿ ಅನ್ನಸಂತರ್ಪಣೆ ನಡೆಯಿತು. ಮಂಗಳವಾರವೂ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ.

    ಕರಿಯಮ್ಮ ದೇಗುಲ ಲೋಕಾರ್ಪಣೆ ಇಂದು: ನಂದನಹೊಸೂರು ಗ್ರಾಮದಲ್ಲಿ ಶಕ್ತಿದೇವತೆ ಕರಿಯಮ್ಮ ದೇವಿಯ ನೂತನ ದೇಗುಲ ಲೋಕಾರ್ಪಣೆ ಕಾರ್ಯಕ್ರಮ ಫೆ. 13ರಂದು ನೆರವೇರಲಿದೆ.

    ಸೋಮವಾರ ಗಂಗಾಪೂಜೆ, ದುರ್ಗಿ ಹೋಮ ಹಾಗೂ ಚಂಡಿಹೋಮ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

    13ರಂದು ಬ್ರಾಹ್ಮೀ ಮುಹೂರ್ತದಲ್ಲಿ ಬೆಳಗ್ಗೆ 5.20ರಿಂದ 7.30ರೊಳಗೆ ಕರಿಯಮ್ಮ ದೇವಿಯ ದೇಗುಲ ಲೋಕಾರ್ಪಣೆ, ವಿಗ್ರಹ ಪ್ರತಿಷ್ಠಾಪನೆ ಹಾಗೂ ಮಧ್ಯಾಹ್ನ 12.20ಕ್ಕೆ ಗೋಪುರ ಕಳಸಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಧರ್ಮಸ್ಥಳದ ಧರ್ಮದರ್ಶಿ ಡಾ. ಶ್ರೀ ವೀರೇಂದ್ರ ಹೆಗ್ಗಡೆ ಸಾನ್ನಿಧ್ಯ ವಹಿಸುವರು. ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಉದ್ಘಾಟಿಸುವರು.

    ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಎಂಎಲ್ಸಿ ಕೆ.ಎಸ್.ನವೀನ್, ಮಾಜಿ ಶಾಸಕ ಎಂ.ಬಿ.ತಿಪ್ಪೇರುದ್ರಪ್ಪ, ಬಿಜೆಪಿ ಮುಖಂಡ ಎಂ.ಸಿ.ರಘುಚಂದನ್, ವಕೀಲ ಜಿ.ಎಚ್.ಶಿವಕುಮಾರ್, ತಾಪಂ ಮಾಜಿ ಸದಸ್ಯ ಮೂಡಲಗಿರಿಯಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಪಿ.ಪ್ರವೀಣ್, ಪಿಡಬ್ಲ್ಯುಡಿ ನಿವೃತ್ತ ಮುಖ್ಯ ಇಂಜಿನಿಯರ್ ಎನ್.ಎಸ್.ರಮೇಶ್ ಅತಿಥಿಗಳಾಗಿ ಭಾಗವಹಿಸುವರು.

    14ರಂದು ಕರಿಯಮ್ಮ ದೇವಿ, ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಗಳ ಹೂವಿನ ಪಲ್ಲಕ್ಕಿ ಉತ್ಸವ ರಾಜಬೀದಿಗಳಲ್ಲಿ ನಡೆಯಲಿದೆ. ಚಿಕ್ಕಮಗಳೂರಿನ ಮಹಿಳಾ ವೀರಗಾಸೆ ಕಲಾ ತಂಡದಿಂದ ವೀರಗಾಸೆ ಪ್ರದರ್ಶನವಾಗಲಿದೆ ಎಂದು ಕರಿಯಮ್ಮ ದೇವಿ ಜೀಣೋದ್ಧಾರ ಸೇವಾ ಸಮಿತಿ, ಗ್ರಾಮಸ್ಥರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts