More

    ಶ್ರೀ ಕವೀಂದ್ರ ತೀರ್ಥರ ಪೂರ್ವಾರಾಧನೆ

    ಗಂಗಾವತಿ: ತಾಲೂಕಿನ ಆನೆಗೊಂದಿಯ ನವವೃಂದಾವನಗಡ್ಡಿಯಲ್ಲಿ ಉತ್ತರಾದಿ ಮಠದಿಂದ ಶ್ರೀ ಕವೀಂದ್ರ ತೀರ್ಥರ ಪೂರ್ವಾರಾಧನೆ ಮಂಗಳವಾರ ವಿಜೃಂಭಣೆಯಿಂದ ಜರುಗಿತು.


    ಗಂಗಾವತಿ: ತಾಲೂಕಿನ ಆನೆಗೊಂದಿಯ ನವವೃಂದಾವನಗಡ್ಡಿಯಲ್ಲಿ ಉತ್ತರಾದಿ ಮಠದಿಂದ ಶ್ರೀ ಕವೀಂದ್ರ ತೀರ್ಥರ ಪೂರ್ವಾರಾಧನೆ ಮಂಗಳವಾರ ವಿಜೃಂಭಣೆಯಿಂದ ಜರುಗಿತು.

    ಹೈಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಉತ್ತರಾದಿ ಮಠದಿಂದ ಗಡ್ಡಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಉತ್ತರಾದಿಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥರ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳಗ್ಗೆ ದಂಡೋದಕ ಸ್ನಾನ, ಶ್ರೀಮನ್ಯಾಯಸುಧಾ ಪಾಠ, ತಪ್ತ ಮುದ್ರಾಧಾರಣೆ, ಜ್ಞಾನ ಸತ್ರ ಮತ್ತು ಶ್ರೀಗಳಿಂದ ಸಂಸ್ಥಾನ ಪೂಜೆ ಜರುಗಿತು. ಪಂಡಿತರಿಂದ ಉಪನ್ಯಾಸ, ಶ್ರೀ ಕವೀಂದ್ರತೀರ್ಥರ ಮೂಲ ವೃಂದಾವನಕ್ಕೆ ಪಂಚಾಮೃತಾಭಿಷೇಕ, ಹಸ್ತೋದಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ಸೇವೆ ನೆರವೇರಿತು.

    ಸಂಜೆ ಸತ್ಯಾತ್ಮ ತೀರ್ಥರಿಂದ ಭಕ್ತರಿಗೆ ಅನುಗ್ರಹ ಸಂದೇಶ, ವೇದಾಂತ ಗ್ರಂಥಗಳ ಪಾಠ, ಸ್ವಸ್ತಿವಾಚನ ನಡೆಯಿತು. ಇದೇ ಸಂದರ್ಭದಲ್ಲಿ ಉತ್ತರಾದಿಮಠದ ಪರಂಪರೆಯ ಪೂರ್ವ ಯತಿಗಳಾದ ಶ್ರೀ ಸತ್ಯಧ್ಯಾನತೀರ್ಥರ ಮಧ್ಯಾರಾಧನೆ ಮಹೋತ್ಸವ ನಿಮಿತ್ತ ವಿಶೇಷ ಉಪನ್ಯಾಸ, ಪ್ರವಚನ, ದೀಪೋತ್ಸವ ನೆರವೇರಿತು.

    ಮಠದ ದಿವಾನ ಶಶಿ ಆಚಾರ್ಯ, ಮುಖಂಡರಾದ ವಿದ್ಯಾಧೀಶಾಚಾರ್ಯ ಗುತ್ತಲ್, ರಾಮಚಾರ್ಯ ಉಮರ್ಜಿ, ಆನಂದಾಚಾರ್ಯ ಜೋಶಿ ಅಕ್ಕಲಕೋಟೆ, ನಾರಾಯಣಾಚಾರ್ಯ ಜೋಶಿ, ಶ್ರೀಕಾಂತಾಚಾರ್ಯ ಮುಕ್ಕುಂದಿ, ಆನಂದತೀರ್ಥಾಚಾರ್ ಹುಲಿಗಿ, ನಾರಾಯಣಾಚಾರ್ಯ ಹುಲಿಗಿ, ಪ್ರಸನ್ನಾಚಾರ್ಯ ಕಟ್ಟಿ, ಬಳ್ಳಾರಿ ರಾಘವೇಂದ್ರಾಚಾರ್ಯ, ಅಡವಿರಾವ್ ಕಲಾಲಬಂಡಿ, ಶ್ಯಾಮಾಚಾರ್ ಜೋಶಿ, ಉಪೇಂದ್ರಾಚಾರ್ ಕೇಸಕ್ಕಿ, ಕೃಷ್ಣಾಚಾರ್, ಸತ್ಯಭೋದಾಚಾರ್, ಜಯಸಿಂಹಾಚಾರ್ ಸೇರಿ ವಿವಿಧ ಜಿಲ್ಲೆಯ ಭಕ್ತರು ಭಾಗವಹಿಸಿದ್ದರು.

    ರಾಮನವಮಿ ವಿಶೇಷ ಪೂಜೆ

    ಹೈಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಉತ್ತರಾದಿ ಮಠಕ್ಕೆ ಏ.17ರವರೆಗೆ ಆರಾಧನೆ ನೆರವೇರಿಸಲು ಅವಕಾಶವಿದ್ದು, ಮಧ್ಯಾಹ್ನ 1ಕ್ಕೆ ಗಡ್ಡಿಯಿಂದ ನಿರ್ಗಮಿಸಬೇಕಿದೆ. ಎರಡನೇ ದಿನದಂದು ಮಧ್ಯಾರಾಧನೆ ಮತ್ತು ಶ್ರೀರಾಮನವಮಿ ಹಮ್ಮಿಕೊಳ್ಳಲಾಗಿದೆ. ಮೂಲ ಸೀತಾ ಸಮೇತ ದಿಗ್ವಿಜಯ ಮೂಲರಾಮಚಂದ್ರ ಮೂರ್ತಿಗಳಿಗೆ ಶ್ರೀಗಳಿಂದ ವಿಶೇಷ ಪಂಚಾಮೃತಾಭಿಷೇಕ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts