ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸೂಕ್ತ ದಾಖಲೆ ಅಗತ್ಯ

Published on

ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ.ಆಕಾಶ ಹೇಳಿಕೆ | ಆಳಂದನಲ್ಲಿ ಶಿಕ್ಷಣ ಅದಾಲತ್

ವಿಜಯವಾಣಿ ಸುದ್ದಿಜಾಲ ಆಳಂದ
ಶಿಕ್ಷಣ ಇಲಾಖೆಯ ಸಿಬ್ಬಂದಿ ವಿರುದ್ಧ ದೂರು ನೀಡುವ ಸಾರ್ವಜನಿಕರು ಸಮರ್ಪಕ ದಾಖಲಾತಿ ಕಡ್ಡಾಯವಾಗಿ ಕೊಡಬೇಕು, ಅಂದಾಗಲೇ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ.ಆಕಾಶ ಎಸ್. ಹೇಳಿದರು.
ಗುರುಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಗುರುವಾರ ಆಯೋಜಿಸಿದ್ದ ಶಿಕ್ಷಣ ಅದಾಲತ್‌ನಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು. ಅಂದಾಗಲೇ ಪ್ರೌಢಶಾಲೆಯಲ್ಲಿ ಬೋಧನೆಯತ್ತ ಆಸಕ್ತಿ ವಹಿಸುತ್ತಾರೆ. ಅಲ್ಲದೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸುಧಾರಣೆ ಕಾಣಲು ಸಾಧ್ಯ ಎಂದು ತಿಳಿಸಿದರು.
ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಶಾಲೆಯಲ್ಲಿ ನಿತ್ಯದ ಕ್ಲಾಸ್‌ಗಳ ಜತೆಗೆ ಹೆಚ್ಚುವರಿ ತರಗತಿ ತೆಗೆದುಕೊಂಡು ವಿಷಯದ ಪುನರ್ಮನನ ಮಾಡಬೇಕು. ಕಳೆದ ಬಾರಿಯಂತೆ ಈ ಸಲವೂ ಎಸ್ಸೆಸ್ಸೆಲ್ಸಿ ಪರೀಕ್ಷೆ ವೆಬ್‌ಕಾಸ್ಟ್ನಿಂದ ನಡೆಯುತ್ತದೆ. ಇನ್ನಷ್ಟು ಕಠಿಣವಾಗಿ ಎಕ್ಸಾಮ್ ಮಾಡಲಾಗುವುದು. ಶಿಕ್ಷಕರು ಸ್ಪರ್ಧಾತ್ಮಕವಾಗಿ ಮಕ್ಕಳಿಗೆ ಬೋಧನೆ ಮಾಡಬೇಕು, ಪರೀಕ್ಷೆ ಭಯ ಹೋಗಲಾಡಿಸಬೇಕು ಎಂದು ಸಲಹೆ ನೀಡಿದರು.
ಬಿಇಒ ಕಚೇರಿಗೆ ಭೇಟಿ ಬಾಕಿ ಬಾಕಿ ಉಳಿದಿರುವ ಕಡತ ಪರಿಶೀಲಿಸಿದರು. ಪ್ರಮುಖರಾದ ಚನ್ನಬಸಪ್ಪ ಮುದೋಳ, ಎಸ್.ಕಟ್ಟಿ, ಸಿ.ಜಿ. ಹಳ್ಳದ, ಅರವಿಂದ ಭಾಸಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net