ಎಡನೀರು ಶ್ರೀ ಚಾತುರ್ಮಾಸ್ಯ ವ್ರತಾಚರಣೆ ಸಮಿತಿ ಸಭೆ

edaneeru
ಚಾತುರ್ಮಾಸ್ಯ ವ್ರತಾಚರಣೆ ಯಶಸ್ವಿಗಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ 4ನೇ ಚಾತುರ್ಮಾಸ್ಯ ವ್ರತಾಚರಣೆ ಜುಲೈ 21ರಿಂದ ಸೆಪ್ಟೆಂಬರ್ 18ರ ತನಕ ವೈಭವದಿಂದ ಜರುಗಲಿದ್ದು, ಈ ನಿಟ್ಟಿನಲ್ಲಿ ನಡೆಯುವ ಧಾರ್ಮಿಕ, ವೈದಿಕ, ಆರಾಧನ, ಅನುಷ್ಠಾನ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ಸಿಗಾಗಿ ಸ್ವಾಗತ ಸಮಿತಿ ರಚನಾ ಸಭೆ ಮಠದಲ್ಲಿ ನಡೆಯಿತು.

ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಿದರು. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್, ಉಜಿರೆ ಅಶೋಕ ಭಟ್, ಕುಂಟಾರು ರವೀಶ ತಂತ್ರಿ, ಎಂ.ನಾ.ಚಂಬಲ್ತಿಮಾರ್, ವೇಣು ನಂಬಿಯಾರ್, ರಾಜೇಂದ್ರ ಕಲ್ಲುರಾಯ, ಡಾ.ಶ್ರೀನಿಧಿ ಸರಳಾಯ, ಆನಂದ ಕೆ.ಮವ್ವಾರು, ವಿಠಲ ಭಟ್, ಮಹೇಶ ವಳಕುಂಜ, ಮಾಧವ ಹೇರಳ, ವೆಂಕಟ್ರಮಣ ಹೊಳ್ಳ, ಕಮಲಾಕ್ಷ ಕಲ್ಲುಗದ್ದೆ, ಪ್ರೊ. ಶ್ರೀನಾಥ, ಜಯನಾರಾಯಣ ತಾಯನ್ನೂರು ಮೊದಲಾದವರು ಉಪಸ್ಥಿತರಿದ್ದರು. ಚಾತುರ್ಮಾಸ್ಯ ಕಾಲಾವಧಿಯಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಯಶಸ್ಸಿಗೆ ಸಲಹೆ ಸೂಚನೆಗಳನ್ನು ನೀಡಲಾಯಿತು.

ಲವ ಕುಮಾರ್ ಐಲ ಪ್ರಾರ್ಥನೆ ಹಾಡಿದರು. ಕೈಯ್ಯೂರು ನಾರಾಯಣ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನ್ಯಾಯವಾದಿ ಎಂ.ನಾರಾಯಣ ಭಟ್ ವಂದಿಸಿದರು. ಸೂರ್ಯ ಭಟ್ ಎಡನೀರು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net