ಚಿತ್ರ ಕಲಾವಿದ ಬಿ.ಕೆ. ಮಾಧವ ರಾವ್‌ಗೆ ‘ಸಿದ್ಧಗಂಗಾ ರಾಷ್ಟ್ರೀಯ ರತ್ನ ಪ್ರಶಸ್ತಿ’

mng--25 June Madava rao
Published on

ಮಂಗಳೂರು: ಬಸವಶ್ರೀ ಫೌಂಡೇಶನ್ ವತಿಯಿಂದ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆದ ಮಹಾಸಂಗಮ ಸಮಾವೇಶದಲ್ಲಿ ಮಂಗಳೂರಿನ ಹಿರಿಯ ಚಿತ್ರ ಕಲಾವಿದ ಬಿ.ಕೆ.ಮಾಧವ ರಾವ್ ಅವರ ಕಲಾ ಸೇವೆ ಹಾಗೂ ಸಾಧನೆಗೆ ‘ಸಿದ್ಧಗಂಗಾ ರಾಷ್ಟ್ರೀಯ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಪಿ.ಕೃಷ್ಣ ಭಟ್, ತುಮಕೂರು ಶ್ರೀ ಸಿದ್ಧರಾಮ ಚೈತನ್ಯ ಮಹಾಸ್ವಾಮೀಜಿ, ಶ್ರೀ ಬಸವೇಶ್ವರ ಪ್ರಾಚಿ ಮಠದ ಶ್ರೀ ತೋಟಾಪುರಿ ಸೋಮಶೇಖರ್ ಗುರೂಜಿ, ಬಿಜೆಪಿ ಮುಖಂಡ ಹರೀಶ್ ಕುಮಾರ್, ಬಸವಶ್ರೀ ಫೌಂಡೇಶನ್‌ನ ಅಧ್ಯಕ್ಷ ಎಚ್.ಸದಾಶಿವ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net