ಕಾಂಗ್ರೆಸ್ ಮುಖಂಡ ಬಾಬುರಾವ ಪಾಟೀಲ್ ಮನೆಯ ಮೇಲೆ ಇಡಿ ದಾಳಿ

ಕಾಂಗ್ರೆಸ್ ಹಿರಿಯ ಮುಖಂಡ ಬಾಬುರಾವ್ ಪಾಟೀಲ್ ಅವರ ಚಿಂಚೋಳಿಯ ಮನೆಯ ಮೇಲೆ ಇಡಿ ಅಧಿಕಾರಿಗಳು ಗುರುವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.
IMG-20231019-WA0024
Published on

ಚಿಂಚೋಳಿ (ಕಲಬುರಗಿ):
ಕಾಂಗ್ರೆಸ್ ಹಿರಿಯ ಮುಖಂಡ ಬಾಬುರಾವ್ ಪಾಟೀಲ್ ಅವರ ಚಿಂಚೋಳಿಯ ಮನೆಯ ಮೇಲೆ ಇಡಿ ಅಧಿಕಾರಿಗಳು ಗುರುವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.

ಚಿಂಚೋಳಿ ಪಟ್ಟಣದ ಹೊರವಲಯದ ಚಂದಾಪೂರದ ಬಸವ ನಗರದಲ್ಲಿ ಇರುವ ಬಾಬುರಾವ ಮನೆಯಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ‌.

ಇಡಿಯ ಇಬ್ಬರು ಅಧಿಕಾರಿಗಳು, ನಾಲ್ಕು ಜನ ಆರ್ಮಿ ಯೋಧರು, ಮಹಿಳಾ ಅಧಿಕಾರಿ ಸೇರಿಕೊಂಡು ತಪಾಸಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net