MUDA Scam| ರಾತ್ರಿ 11ರವರೆಗೆ ತನಿಖೆ ನಡೆಸಿದ ED

ED Raid
Published on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಕಚೇರಿ ಹಾಗೂ ತಾಲೂಕು ಕಚೇರಿ ಮೇಲೆ ಶುಕ್ರವಾರ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ (Enforcement Directorate) ಅಧಿಕಾರಿಗಳು ದಿನವಿಡೀ ನಿರಂತರವಾಗಿ ತನಿಖೆ ನಡೆಸಿದರು. ಬೆಳಗ್ಗೆ 9.50ಕ್ಕೆ ಮುಡಾ ಕಚೇರಿಗೆ ದಾಳಿ ನಡೆಸಿ ತನಿಖೆ ಪ್ರಾರಂಭಿಸಿದ ಇಡಿ ಅಧಿಕಾರಿಗಳು ರಾತ್ರಿ 11ರವರೆಗೆ ವಿಚಾರಣೆ ನಡೆಸಿದರು.

ಈ ದಿನದ ತನಿಖೆ ಪೂರ್ಣಗೊಳಿಸಿದ ಇಡಿ (ED) ಅಧಿಕಾರಿಗಳು ರಾತ್ರಿ 11ಕ್ಕೆ ವಿಶ್ರಾಂತಿಗೆ ಮುಡಾದಿಂದ ನಿರ್ಗಮಿಸಿದರು. ಶನಿವಾರ ಬೆಳಗ್ಗೆ ಮತ್ತೆ ತನಿಖೆ ಮುಂದುವರೆಯಲಿದೆ. ಹಗರಣಕ್ಕೆ ಸಂಬಂಧಿಸಿದಂತೆ ಮುಡಾದಲ್ಲಿ (MUDA) ಹಲವಾರು ಕಡಗಳು ಲಭ್ಯವಿಲ್ಲದೆ ಇರುವುದು ತನಿಖೆಯ ವೇಳೆಯಲ್ಲಿ ಗಮನಕ್ಕೆ ಬಂದಿದೆ. ಹೀಗಾಗಿ ಪ್ರಸ್ತುತ ಇರುವ ಕಡತಗಳು ಸಹ ನಾಪತ್ತೆಯಾಗಬಾರದು ಎಂಬ ಉದ್ದೇಶದಿಂದ ಮುಡಾದ ಮೇಲೆ ಕಣ್ಗಾವಲು ಇರಿಸಲು ಸಿಆರ್‌ಪಿಎಫ್ (CRPF) ಯೋಧರು ಹಾಗೂ ಪೊಲೀಸರು ಬೆಳಗ್ಗಿನವರೆಗೆ ಕಾವಲು ಕಾಯಲಿದ್ದಾರೆ.

ಇದಕೋಸ್ಕರ ಸಿಆರ್‌ಪಿಎಫ್ (CRPF) ಯೋಧರಿಗೆ ಮುಡಾ ಕಚೇರಿಗೆ ಹಾಸಿಗೆ, ದಿಂಬು, ರಗ್ಗನ್ನು ತರಿಸಿ ಕೊಡಲಾಗಿದೆ. ಸಿಆರ್‌ಪಿಎಫ್ ಯೋಧರು ಮುಡಾದ ಒಳಗೆ ಕಾವಲು ಕಾಯುತ್ತಿದ್ದು, ಪೊಲೀಸರು ಗೇಟ್‌ನಲ್ಲಿ ಕಾವಲು ಕಾಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net