ವಿದ್ಯುತ್​ ಮೀಟರ್​ ಹೆಸರು ಬದಲಾವಣೆ ಸುಲಭ!

electric-measuring-power-meter-energy-cost-home-office-scaled
Published on

ಬೆಂಗಳೂರು: ನಗರವಾಸಿಗಳಿಗೆ ಶ್ರೀದಲ್ಲೇ ವಿದ್ಯುತ್​ ಮೀಟರ್​ಗಳ ಮಾಲೀಕತ್ವವನ್ನು ವರ್ಗಾಯಿಸಲು ಅನ್​ಲೈನ್​ ವ್ಯವಸ್ಥೆ ಮೂಲಕ ಸುಲಭವಾಗಲಿದೆ. ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ (ಬೆಸ್ಕಾಂ) ಹಾಗೂ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಂಯೋಜನೆಯೊಂದಿಗೆ "ಅಟೋಮೆಟಿಕ್​ ನೇಮ್​ ಚೇಂಜ್​ ಟ್ರಿಗರ್​' ಆನ್​ಲೈನ್​ ಪೋರ್ಟಲ್​ ಅನ್ನು ಪ್ರಸ್ತುತ ಪಡಿಸಲಿದ್ದು, ಆಸ್ತಿ ಗುರುತಿನ ಚೀಟಿ ಆಧಾರದಲ್ಲಿ ವರ್ಗಾವಣೆಗಳು ನಡೆಯಲಿದೆ.

ಹೆಸರು ವರ್ಗಾವಣೆ ಸಮಸ್ಯೆ ನಗರದಲ್ಲಿ ಆಳವಾಗಿ ಬೇರೂರಿದ್ದು, ಸದ್ಯ ಇದಕ್ಕೆ ಪರಿಹಾರ ಸಿಗುವಂತಿದೆ. ಮುಖ್ಯವಾಗಿ ವಸತಿ ಸಮುಚ್ಚಯಗಳಲ್ಲಿ ವಾಸಿಸುವ ಜನರಿಗೆ ಕಟ್ಟಡ ಮಾಲೀಕರಿಂದ ಅಥವಾ ಜಾಗದ ಮಾಲೀಕರಿಂದ ಮೀಟರ್​ ಒಡೆತನ ಸಿಗದೆ ಸಾಕಷ್ಟು ಸಮಸ್ಯೆಗಳಾಗಿತ್ತು. ಇನ್ನುಮುಂದೆ ಸುಲಭವಾಗಿ ಆನ್​ಲೈನ್​ ಮೂಲಕ ವರ್ಗಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಹಾಗೂ ಬಿಬಿಎಂಪಿಯ ಇ&ಖಾತಾ ಆನ್​ಲೈನ್​ ವ್ಯವಸ್ಥೆ ಪ್ರಕ್ರಿಯೆಯನ್ನು ಪ್ರೇರೇಪಿಸಿದೆ. ಇ&ಖಾತಾ ಕಡ್ಡಾಯವಾಗುತ್ತಿದ್ದಂತೆ ಮೀಟರ್​ ಹೆಸರು ಬದಲಾವಣೆಗೆ ಬೆಸ್ಕಾ ಉಪವಿಭಾಗ ಕಚೇರಿಗಳಲ್ಲಿ ಮನವಿಗಳು ಅಧಿಕವಾಗ ತೊಡಗಿದೆ. ಇದರಿಂದ ಬೆಸ್ಕಾಂ ಸಿಬ್ಬಂದಿಗೂ ತಲೆನೋವಾಗಿತ್ತು. ಇನ್ನುಮುಂದೆ ಆನ್​ಲೈನ್​ ಪೋರ್ಟಲ್​ ಸಹಾಯದಿಂದ ಯಾವುದೇ ಮಧ್ಯವರ್ತಿಗಳ ಪ್ರವೇಶವಿಲ್ಲದೆ, ಜಗಳಮುಕ್ತವಾಗಿ ಮೀಟರ್​ ಹೆಸರು ಬದಲಾವಣೆಯನ್ನು ಮಾಡಿಕೊಳ್ಳಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net