ಬೆಳ್ಳಂಬೆಳಗ್ಗೆ ಹುಬ್ಬಳ್ಳಿಯಲ್ಲಿ ಗುಂಡಿನ ಸದ್ದು; ಎರಡು ಕಾಲಿಗೆ ಗುಂಡು ಹಾರಿಸಿ ಕುಖ್ಯಾತ ದರೋಡೆಕೋರ​ನನ್ನು ಬಂಧಿಸಿದ Police ಅಧಿಕಾರಿಗಳು

Chaddi Gang
Published on

ಹುಬ್ಬಳ್ಳಿ: ಮನೆ ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ (Police) ಬೇಕಾಗಿದ್ದ ಕುಖ್ಯಾತ ರೌಡಿಶೀಟರ್​ ಪಾಲಾ ವೆಂಕಟೇಶ್ವರರಾವ್​ನ ಎರಡು ಕಾಲಿಗೆ ಗುಂಡು ಹಾರಿಸಿ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ಒಂದರ ಸಂಬಂಧ ಪಾಲಾ ವೆಂಕಟೇಶ್ವರ್​ ರಾವ್​ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಕರೆದುಕೊಂಡು ಹೋಗುವಾಗ ಆತ ಅಧಿಕಾರಿಗಳ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಅಧಿಕಾರಿಗಳು ರಕ್ಷಣೆಗಾಗಿ ಆರೋಪಿಯ ಎರಡು ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಪಿಎಸ್​ಐ ಸೇರಿದಂತೆ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದು, ಗಾಯಾಳುಗಳನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತು ಮಾಹಿತಿ ನೀಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತ ಶಶಿಕುಮಾರ್​, ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ನವಲೂರಿನಲ್ಲಿ ವಿಕಾಸ್ ಕುಮಾರ್ ಎಂಬುವವರ ಮನೆಗೆ ಕನ್ನ ಹಾಕಲು ಪಾಲಾ ವೆಂಕಟೇಶ್ವರ್​ ಹಾಗೂ ಸಹಚರರು ಹೊಂಚು ಹಾಕಿದ್ದರು. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ವೆಂಕಟೇಶ್ವರ್​ನನ್ನು ಬಂಧಿಸಿದ್ದರು.

Police Firing

ಆರೋಪಿ ಏಕಾಏಕಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪಿಎಸ್​ಐ ಪ್ರಮೋದ್ ಎರಡು ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಕೂಡಲೇ ಆತ ಕುಸಿದು ಬಿದ್ದಿದ್ದು, ಆರೋಪಿಯನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಪಿಎಸ್​ಐ ಪ್ರಮೋದ್​ ಸೇರಿದಂತೆ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದು, ಗಾಯಾಳುಗಳನ್ನು ಕಿಮ್ಸ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಚ್ಚಿ ಬೀಳಿಸುವಂತಿದೆ ದರೋಡೆಕೋರರ ಕ್ರೂರತನ

ಮೂಲತಃ ಆಂಧ್ರಪ್ರದೇಶದವನಾದ ಪಾಲಾ ವೆಂಕಟೇಶ್ವರ್​ರಾವ್​ ಈ ವರ್ಷ ಜೂನ್​ 06ರಂದು ಅಶೋಕ್​ ಕದಂ ಎಂಬುವವರು ಮನೆಗೆ ನುಗ್ಗಿ ದರೋಡೆ ಮಾಡಿ ಬಳಿಕ ದಂಪತಿಗಳನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ಆರೋಪಿಗಳ ಹೀನ ಕೃತ್ಯ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಿಗೆ ಬೇಕಾಗಿರುವ ಪಾಲಾ ವೆಂಕಟೇಶ್ವರ್​ರಾವ್​ ಹಾಗೂ ಕುಟುಂಬಸ್ಥರು ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದು, ಸದ್ಯ ಪೊಲೀಸರು ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net