

ಮಾಗಡಿ ಪಟ್ಟಣ ಪಂಚಾಯಿತಿಯ 16ನೇ ವಾರ್ಡ್‌ನ ಸಮಸ್ಯೆ
ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ
ಪಟ್ಟಣ ಪ್ರದೇಶದಲ್ಲಿ ಒಟ್ಟು 23 ವಾರ್ಡ್‌ಗಳಿದ್ದು, ಸಮಾನವಾಗಿ ಎಲ್ಲ ವಾರ್ಡ್‌ಗಳ ಅಭಿವೃದ್ಧಿ ಕಂಡರೆ ಇನ್ನು ಕೆಲ ವಾರ್ಡ್‌ಗಳಲ್ಲಿ ಚಿಕ್ಕಪುಟ್ಟ ಸಮಸ್ಯೆಗಳು ಜನರನ್ನು ಕಾಡುತ್ತಿದ್ದು, ಅದರಲ್ಲಿ 16ನೇ ವಾರ್ಡ್‌ನ ಸಮಸ್ಯೆಗಳು ಇನ್ನು ಬಗರಹರಿದಿಲ್ಲ.
ಕಳೆದ 25 ವರ್ಷದ ಹಿಂದೆ ಪುರಸಭೆ ಅಧ್ಯಕ್ಷರಾಗಿದ್ದ ರಂಗನಾಥಶೆಟ್ಟಿ ಅವರು ಪಟ್ಟಣದಲ್ಲಿ 255 ಮಂದಿ ವಸತಿ ರಹಿತರನ್ನು ಗುರುತಿಸಿ 2,500 ಹಣ ಪಾವತಿಸಿಕೊಂಡು ನಿವೇಶನ ಹಂಚಿಕೆ ಮಾಡಿದ್ದರು. ಕರ್ನಾಟಕ ಗೃಹಮಂಡಳಿಯಿಂದ ಲೇಔಟ್ ನಿರ್ಮಿಸಿ ಹರಾಜು ಮಾಡಿ 64 ನಿವೇಶನ ನೀಡಿದ್ದಾರೆ.
ಆದರೆ ಪುರಸಭೆ ಈ ಎಲ್ಲ ನಿವೇಶನಗಳಿಗೆ ಇಲ್ಲಿಯವರೆಗೂ ಇ-ಖಾತೆ ಮಾಡಿಕೊಟ್ಟಿಲ್ಲ, ಅಭಿವೃದ್ಧಿ ಶುಲ್ಕ ನೀಡಿ ಇ-ಖಾತೆ ಮಾಡಿಸಿಕೊಳ್ಳಲು ನಾಗರಿಕರೇ ಮುಂದೆ ಬಂದರೂ ಪುರಸಭೆ ಖಾತೆ ನೀಡುತ್ತಿಲ್ಲ ಎನ್ನುವ ದೂರುಗಳಿವೆ. ಪಟ್ಟಣ ಪಂಚಾಯಿತಿಗೆ ನಷ್ಟವಾಗಿದೆ, ಇ-ಖಾತೆ ಮಾಡಿಕೊಟ್ಟರೆ ಮನೆ ನಿರ್ಮಿಸಿಕೊಳ್ಳಲು ಬ್ಯಾಂಕ್‌ಗಳಲ್ಲಿ ಸಾಲ ಪಡೆದುಕೊಳ್ಳಬಹುದು, ಈ ಬಗ್ಗೆ ಶಾಸಕರು ಸಭೆ ನಡೆಸಿ ಇ-ಖಾತೆ ಮಾಡಿಕೊಡುವ ಬಗ್ಗೆ ತಿಳಿಸಿ ಅಧಿಕಾರಿಗಳಿಗೆ ಸೂಚಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳಿಯರ ಆರೋಪ.
ವಾರ್ಡ್‌ನಲ್ಲಿ 5 ಕೊಳವೆ ಬಾವಿ ಇದ್ದು, ಜತೆಗೆ ಮಂಚನಬೆಲೆ ಜಲಾಶಯದ ನೀರು ಪೂರೈಕೆ ಮಾಡಲಾಗುತ್ತಿದೆ. ಪುರಸಭೆಯಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ಜಾಗ ನೀಡಿರುವುದರಿಂದ ಮಾಗಡಿ ರೋಟರಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದ್ದು, ಸಾವಿರಾರು ಮಂದಿಗೆ ಅನುಕೂಲವಾಗಿದೆ.
ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದೆ ಕೆಲವೆಡೆ ತ್ಯಾಜ್ಯ ಚರಂಡಿಗೆ ಸೇರಿ ಸಮಸ್ಯೆಯಾಗಿದೆ. ಅಣ್ಣಮ್ಮ ದೇವಾಲಯ ಸುತ್ತಮುತ್ತ ಹೆಚ್ಚು ಚರಂಡಿ ಸಮಸ್ಯೆ ಉಂಟಾಗಿದೆ. ಇದರಿಂದ ಜನರು ನಿತ್ಯ ಗಬ್ಬು ವಾಸನೆ ಮತ್ತು ಮಳೆ ಬಂದಾಗ ನೀರಿನ ಸಮಸ್ಯೆ ಎದುರಿಸುವಂತಹ ಪರಿಸ್ಥಿತಿ ಇದೆ. ಒಳಚರಂಡಿ ಕಾಮಗಾರಿ ಹೆಸರಲ್ಲಿ ಅಣ್ಣಮ್ಮ ದೇವಾಲಯದ ಹಿಂಭಾಗ ರಸ್ತೆಯನ್ನು ಪದೇಪದೆ ಕಿತ್ತುಹಾಕುತ್ತಿರುವುದರಿಂದ ಜ್ಯೋತಿನಗರ, ಪಾರ್ಕ್ ರಸ್ತೆ ಸಂಪೂರ್ಣ ಹಾಳಾಗಿದೆ.
ವಾರ್ಡ್‌ನಲ್ಲಿ 1,400 ಮಂದಿ ವಾಸವಿದ್ದು, ಇದರಲ್ಲಿ 1,300 ಮತದಾರರಿದ್ದಾರೆ. ಸರ್ಕಾರಿ ನೌಕರರಿಗಿಂತ ಕೂಲಿ ಕಾರ್ಮಿಕರು, ರೇಷ್ಮೆ ಕೆಲಸಗಾರರು, ಕೈಮಗ್ಗ ನೇಕಾರರು, ಗಾರ್ಮೆಟ್ಸ್ ಕಾರ್ಮಿಕರೇ ಹೆಚ್ಚು ವಾಸ ಮಾಡುತ್ತಿದ್ದಾರೆ. ಸ್ಥಳಿಯವಾಗಿ ಗುಡಿ ಕೈಗಾರಿಕೆ ಅವಶ್ಯವಿದ್ದು, ಕೂಲಿ ಕೆಲಸ ನಂಬಿಕೊಂಡು ನಿತ್ಯ ಬೆಂಗಳೂರಿಗೆ ಹೋಗುವವರೆ ಹೆಚ್ಚು. ವಾರ್ಡ್‌ಗೆ ಜ್ಯೋತಿನಗರ, ಹೌಸಿಂಗ್‌ಬೋರ್ಡ್ ಕಾಲನಿ, ಮಂಜುನಾಥ ಬಡಾವಣೆ, ವಿಶ್ವೇಶ್ವರಯ್ಯ ಲೇಔಟ್ ಹೊಂದಿಕೊಂಡಿದೆ.
ವಿಜಯಾ ರೂಪೇಶ್ ಪುರಸಭಾ ಸದಸ್ಯೆ (9741041632)
ಧನಂಜಯ ಸ್ಥಳಿಯ.
ಕೇಬಲ್ ಮಂಜುನಾಥ್, ಸ್ಥಳಿಯ