

ಬೆಂಗಳೂರು: ವಿಶಾಖಪಟ್ಟಣದಲ್ಲಿ ಸೋಮವಾರ ನಡೆದ ಭಾರತ ಸರ್ಕಾರವು 28ನೇ ರಾಷ್ಟ್ರೀಯ ಇ-&ಆಡಳಿತ ಪ್ರಶಸ್ತಿ ಸಮಾರಂಭದಲ್ಲಿ ಬಿಬಿಎಂಪಿಯ ಇ&-ಖಾತಾ ಯೋಜನೆಗೆ "ರಾಷ್ಟ್ರೀಯ ಇ&-ಆಡಳಿತ ಪ್ರಶಸ್ತಿ " ನೀಡಿ ಗೌರವಿಸಿದೆ.
ಮಹತ್ವಾಕಾಂಕ್ಷಿ ಯೋಜನೆಯಾದ ಇ&-ಖಾತಾ ಯೋಜನೆಯು ಆಸ್ತಿಯ ದಾಖಲೆಗಳನ್ನು ಡಿಜಿಟಲೀಕರಿಸುವುದು, ಪಾರದರ್ಶಕತೆಯನ್ನು ಖಾತ್ರಿ ಪಡಿಸುವುದು ಹಾಗೂ ನಾಗರಿಕ ಸೇವಾ ವಿತರಣೆಯನ್ನು ಬಲಪಡಿಸುವಲ್ಲಿ ಮುಂಚೂಣಿಯ ಪಾತ್ರ ವಹಿಸಿದಕ್ಕಾಗಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶಂಸಿಸಲಾಯಿತು.
ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ಜಂಟಿ ಆಯುಕ್ತೆ ಲಕ್ಷ್ಮೀದೇವಿ, ಎನ್.ಐ.ಸಿಯ ಹಿರಿಯ ತಾಂತ್ರಿಕ ನಿರ್ದೇಶಕ ಸುರೇಶ್ ಬಾಬು ಹಾಗೂ ಇ&-ಖಾತಾ ತಂಡವು ಪ್ರಶಸ್ತಿಯನ್ನು ಸ್ವೀಕರಿಸಿದರು.
ಪ್ರಧಾನ ಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದು, ಇದೇ ವೇಳೆ ಇ-&ಆಡಳಿತ ಪ್ರಶಸ್ತಿ ಜತೆಗೆ 10 ಲಕ್ಷ ರೂ.ನಗದು ಬಹುಮಾನ ಕೂಡಾ ನೀಡಲಾಯಿತು.