ಯಾದಗಿರಿ :ಯಾದಗಿರ ಜಿಲ್ಲೆಯಲ್ಲಿ ಕರ್ನಾಟಕ ಸಂಘಗಳ ನೊಂದಣೆ ಅಧಿನಿಯಮ 1960ರಡಿ ನೊಂದಣಿಯಾದ ಸಂಘಗಳು, ಕಲಂ13ರ ಪ್ರಕಾರ ಪ್ರತಿ ವಷÀð ಕಡ್ಡಾಯವಾಗಿ ಸಂಘದ ಆಡಳಿತ ಮಂಡಳಿಯ ಸದಸ್ಯರ ಹೆಸರು, ವಿಳಾಸ, ಲೆಕ್ಕ ಪರಿಶೋಧಿತ ಆದಾಯ ಮತ್ತು ವೆಚ್ಚದ ಹಾಗೂ ಆಯವ್ಯಯ ಪಟ್ಟಿಯನ್ನು ಪ್ರತಿ ವರ್ಷ ಸರ್ವ ಸಾಧಾರಣಾ ಸಭೆ ಜರುಗಿದ 14 ದಿನಗಳ ಒಳಗೆ ಜಿಲ್ಲಾ ಸಂಘಗಳ ನೊಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪನಿಬಂಧಕರು ಯಾದಗಿರ ಜಿಲ್ಲೆ ಯಾದಗಿರ ಇವರಲ್ಲಿ ದಾಖಲಾತಿಗಳನ್ನು ಫೈಲು ಮಾಡುವದು ಕಡ್ಡಾಯವಾಗಿರುತ್ತದೆ ಎಂದು ಯಾದಗಿರಿ ಸಹಕಾರ ಸಂಘಗಳ ಉಪನಿಬಂಧಕರು ಪವನಕುಮಾರ ಅವರು ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಕರ್ನಾಟಕ ಸಂಘಗಳ ನೊಂದಣಿ ಅಧಿನಿಯಮ ಅನ್ವಯ ಸಹಕಾರ ಸಂಘಗಳ ನಿಬಂಧಕರು ಕರ್ನಾಟಕ ರಾಜ್ಯ ಬೆಂಗಳೂರು ಅವರು ಸುತ್ತೋಲೆ ಸಂಖ್ಯೆ/ಆರ್.ಸಿ.ಎಸ್/ಸA.ಸA-1/63/2024-25 ದಿನಾಂಕ 14-03-2025ರ ಪ್ರಕಾರ ಕಳೆದ 05 ವರ್ಷಗಳ ಮೇಲ್ಪಟ್ಟು ಸಂಘ, ಸಂಸ್ಥೆಗಳು ದಾಖಲಾತಿಗಳೊಂದಿಗೆ ಫೈಲಿಂಗ ಮಾಡಲು 31 ಡಿಸೆಂಬರ 2025ರ ವರೆಗೆ ಕಾಲವಕಾಶ ನೀಡಿರುತ್ತಾರೆ. ಪ್ರಯುಕ್ತ ಕಳೆದ 05 ವರ್ಷಗಳ ಮೇಲ್ಪಟ್ಟು ನವೀಕರಣಗೊಳ್ಳದೆ, ಇರುವ ಸಂಘ, ಸಂಸ್ಥೆಗಳ ದಾಖಲಾತಿಗಳನ್ನು 31 ಡಿಸೆಂಬರ 2025ರ ಡಿಸೆಂಬರ್ 31ರ ಒಳಗೆ ಸಲ್ಲಿಸಬೇಕು, ತಪ್ಪಿದಲ್ಲಿ 5 ವರ್ಷಗಳ ಮೇಲ್ಪಟ್ಟ ಸಂಘ, ಸಂಸ್ಥೆಗಳ ನವೀಕರಣಕ್ಕೆ ಸಲ್ಲಿಸದೆ ಇರುವ ಸಂಘ, ಸಂಸ್ಥೆಗಳ ಸಂಖ್ಯೆಯನ್ನು ರದ್ದು ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.