

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕೇಂದ್ರ ಭಾಗದ ಹಳೆಯ 100 ವಾರ್ಡ್‌ಗಳಲ್ಲಿ ಇ-ತಂತ್ರಾಂಶವನ್ನು ಜಾರಿಗೊಳಿಸಲಾಗಿದೆ. ಈ ಮೂಲಕ ಆಸ್ತಿ, ಮನೆ, ನಿವೇಶನಗಳನ್ನು ಹಲವರಿಗೆ ಮಾರಾಟ ಮಾಡುವುದು, ನಕಲಿ ದಾಖಲೆ ಸೃಷ್ಟಿಸುವುದಕ್ಕೆ ಶಾಶ್ವತ ತಡೆ ಬಿದ್ದಂತಾಗಿದೆ.
ಇ- ತಂತ್ರಾಂಶ ಎಂಬುದು ಆನ್‌ಲೈನ್ ತಂತ್ರಾಂಶವಾಗಿದ್ದು, ಪಾಲಿಕೆಯ 100 ವಾರ್ಡ್‌ಗಳಲ್ಲಿನ ಎಲ್ಲ ಆಸ್ತಿಗಳ ದತ್ತಾಂಶಗಳನ್ನು ತಂತ್ರಾಂಶಕ್ಕೆ ವರ್ಗಾಯಿಸಲಾಗುತ್ತಿದೆ. ಯಾವುದೇ ಆಸ್ತಿಗಳನ್ನು ತೆರಯಬೇಕಿದ್ದರೂ ಅವುಗಳಿಗೆ ವಲಯ, ವಾರ್ಡ್ ಹಾಗೂ ಆಸ್ತಿ ಮಾಲೀಕರ ಹೆಸರು ನಮೂದಿಸಿ ತೆರಯಬೇಕು. ಆಸ್ತಿಗಳಿಗೆ ಜಿಐಎಸ್ ಮ್ಯಾಪಿಂಗ್ ಮಾಡಲಾಗಿದ್ದು, ಆಸ್ತಿ ದಾಖಲಾತಿಗಳ ಬಗ್ಗೆ 48 ಬಗೆಯ ದತ್ತಾಂಶ ಸಂಗ್ರಹಿಸಲಾಗಿದೆ. ಆಸ್ತಿ ಮಾಲೀಕರು ತಮ್ಮಆಸ್ತಿ ದಾಖಲೆ ಬೇಕೆಂದಾಗ ಪಾಲಿಕೆಗೆ 125 ರೂ. ಪಾವತಿಸಿ ಇ-ತಂತ್ರಾಂಶದಿಂದ ಮುದ್ರಣ ಪಡೆಯಬಹದುದಾಗಿದೆ.
ಪ್ರಾಯೋಗಿಕ ಜಾರಿ ಯಶಸ್ವಿ: ಬಿಬಿಎಂಪಿಯ ಶಾಂತಿನಗರ ಕಂದಾಯ ಉಪವಿಭಾಗದ 3 ವಾರ್ಡ್‌ಗಳಲ್ಲಿ ಇ-ಆಸ್ತಿ ತಂತ್ರಾಂಶವನ್ನು ಕಳೆದ ಡಿಸೆಂಬರ್-2020ರಲ್ಲಿ ಜಾರಿಗೊಳಿಸಲಾಗಿತ್ತು. ಈ ವಾರ್ಡ್‌ಗಳಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ 2ನೇ ಹಂತದಲ್ಲಿ ಉಳಿದ 97 ವಾರ್ಡ್‌ಗಳಿಗೆ ವಿಸ್ತರಣೆ ಮಾಡಲಾಗಿದೆ. ಇನ್ನು 3ನೇ ಹಂತದಲ್ಲಿ 2007ರಲ್ಲಿ ಹೊಸದಾಗಿ ಪಾಲಿಕೆಗೆ ಸೇರ್ಪಡೆಗೊಂಡ ವ್ಯಾಪ್ತಿಗೂ ಅನುಷ್ಠಾನ
ಮಾಡಲಾಗುವುದು ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ರಶೀದಿ ವಿತರಣೆ ವಿಳಂಬ: ತಂತ್ರಾಂಶ ಜಾರಿಗೊಂಡ 100 ವಾರ್ಡ್‌ಗಳ ವ್ಯಾಪ್ತಿಯಲ್ಲಿರುವ ಸ್ವತ್ತುಗಳ ದತ್ತಾಂಶವನ್ನು ಇ-ಆಸ್ತಿ ತಂತ್ರಾಂಶಕ್ಕೆ ವರ್ಗಾಯಿಸಲಾಗುತ್ತಿದೆ. ಹೀಗಾಗಿ, ಈ ಆಸ್ತಿಗಳ ಗಣಕೀಕೃತ ಖಾತಾ ಪ್ರಮಾಣ ಪತ್ರ, ಖಾತಾ ಉದೃತ ಭಾಗ ಮುದ್ರಣ ಮತ್ತು 2007-08 ನೇ ಸಾಲಿನವರೆಗೆ ಬೇ-ಬಾಕಿ ಆಸ್ತಿತೆರಿಗೆ ಪಾವತಿಸುವ ಪ್ರಕರಣಗಳಿಗೆ ರಶೀದಿ ವಿತರಣೆಯಲ್ಲಿ ವಿಳಂಬವಾಗುತ್ತದೆ. ಹೀಗಾಗಿ, ಸಾರ್ವಜನಿಕರು
ಸಹಕರಿಸುವಂತೆ ಪಾಲಿಕೆ ಮನವಿ ಮಾಡಿದೆ.
ಡಿಜಿ ಲಾಕರ್ ವ್ಯವಸ್ಥೆ: ನಗರದಲ್ಲಿ ಆಸ್ತಿ ಹೊಂದಿದ ಪ್ರತಿಯೊಬ್ಬ ಮಾಲೀಕರ ಆಧಾರ್ ಕಾರ್ಡ್ ಸಂಖ್ಯೆಯ ಜೋಡಣೆಯೊಂದಿಗೆ ‘ಡಿಜಿ ಲಾಕರ್’ ಸೃಷ್ಟಿಸಬಹುದಾಗಿದೆ. ಆಸ್ತಿ ಸಂಬಂಧಿತ ಎಲ್ಲ ಸ್‌ಟಾ ಕಾಪಿಗಳನ್ನು ಇದರಲ್ಲಿ ಭದ್ರವಾಗಿಡಬಹುದು. ಡಿಜಿಟಲ್ ಆಸ್ತಿ ನಿರ್ಮಾಣವಾದ ನಂತರ ಆಸ್ತಿ ಮಾರಾಟ, ಮಾಲೀಕತ್ವ ವರ್ಗಾವಣೆ ಯಾವುದೆ ಕಾರ್ಯಕ್ಕೂ ಡಿಜಿಟಲ್ ಸಹಿ ದಾಖಲೆ ಪಡೆಯಬೇಕಾಗುತ್ತದೆ. ಹೀಗಾಗಿ ಅನಧಿಕೃತ
ಮಾರಾಟ, ಸುಳ್ಳು ದಾಖಲೆ ನಿರ್ಮಾಣ ಸೇರಿ ಯಾವುದೆ ಭ್ರಷ್ಟಾಚಾರ ನಡೆಯುವುದನ್ನು ಮೂಲದಲ್ಲಿ ತಡೆಯಬಹುದಾಗಿದೆ.