ಸ್ವಾತಂತ್ರ್ಯ ಬಲಿಷ್ಠಗೊಳಿಸುವ ಕರ್ತವ್ಯ

Meeting-1
ಹೆಬ್ರಿ ತಾಲೂಕು ಆಡಳಿತ ವತಿಯಿಂದ ಸಭಾ ಕಾರ್ಯಕ್ರಮವನ್ನು ಹೆಬ್ರಿ ಗ್ರಾಪಂ ಅಧ್ಯಕ್ಷ ತಾರಾನಾಥ್ ಎಸ್.ಬಂಗೇರ ಉದ್ಘಾಟಿಸಿದರು
Published on

ಹೆಬ್ರಿ: ಮಹಾತ್ಮರ ತ್ಯಾಗ ಹಾಗೂ ಶೌರ್ಯದ ಸಂಕೇತವಾಗಿ ಸ್ವಾತಂತ್ರ್ಯ ಸಿಕ್ಕಿದೆ. ಬ್ರಿಟಿಷರ ದಾಸತ್ವದಿಂದ ಬಿಡುಗಡೆ ಪಡೆದು ಅನೇಕ ಸಮಸ್ಯೆಗಳಿದ್ದರೂ ಇಂದಿನ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಭಾರತ ಒಂದಾಗಿದೆ. ನಮಗೆ ಸಿಕ್ಕ ಸ್ವಾತಂತ್ರ್ಯ ಉಳಿಸಿ ಬಲಿಷ್ಠಗೊಳಿಸುವುದು ನಮ್ಮ ಕರ್ತವ್ಯ ಎಂದು ಹೆಬ್ರಿ ತಹಸೀಲ್ದಾರ್ ಎಸ್.ಎಸ್.ಪ್ರಸಾದ್ ಹೇಳಿದರು.

ಹೆಬ್ರಿ ತಾಲೂಕು ಆಡಳಿತ ವತಿಯಿಂದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಹೆಬ್ರಿ ಗ್ರಾಪಂ ಅಧ್ಯಕ್ಷ ತಾರಾನಾಥ್ ಎಸ್.ಬಂಗೇರ ಉದ್ಘಾಟಿಸಿದರು. ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸರ್ಕಾರಿ ನೌಕರರ ಕ್ರೀಡಾಕೂಟದ ರಾಷ್ಟ್ರಮಟ್ಟದ ಸಾಧಕ ಗ್ರಾಮ ಆಡಳಿತ ಅಧಿಕಾರಿ ನವೀನ್ ಕುಮಾರ್ ಕುಕ್ಕುಜಿ ಅವರನ್ನು ಸನ್ಮಾನಿಸಲಾಯಿತು. ಹೆಬ್ರಿ ಪಿಎಸ್‌ಐ ಮಹೇಶ್ ಟಿಎಂ ನೇತೃತ್ವದಲ್ಲಿ ಪಥಸಂಚಲ ನಡೆಯಿತು. ಎಎನ್‌ಎಫ್ ಇನ್‌ಸ್ಪೆಕ್ಟರ್ ಸತೀಶ್ ಬಿ.ಎಸ್., ಕಾಲೇಜು ವಿಭಾಗದ ಪ್ರಾಂಶುಪಾಲ ಉಮೇಶ್ ಎ.ಡಿ., ಉಪಪ್ರಾಂಶುಪಾಲ ದಿವಾಕರ ಮರಕಾಲ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲೂಕು ಜನಜಾಗೃತಿ ಸಮಿತಿ ಅಧ್ಯಕ್ಷ ನೀರೆ ಕೃಷ್ಣಶೆಟ್ಟಿ, ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ರವಿಚಂದ್ರ ಕಾರಂತ್, ಶಂಕರ್ ಶೇರಿಗಾರ್, ಸೀತಾನದಿ ವಿಠಲ ಶೆಟ್ಟಿ, ಪಿಡಿಒ ಸದಾಶಿವ ಸೆರ್ವೆಗಾರ್, ಹರ್ಷ ಶೆಟ್ಟಿ ಉಪಸ್ಥಿತರಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net