ಅಖಂಡ ಭಾರತ ಸಂಕಲ್ಪ ದಿನ, ಪಂಜಿನ ಮೆರವಣಿಗೆ

parede
ಗಂಗೊಳ್ಳಿ ಹಿಂಜಾವೇ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನ, ಪಂಜಿನ ಮೆರವಣಿಗೆ ನಡೆಯಿತು
Published on

ಗಂಗೊಳ್ಳಿ: ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನ, ಪಂಜಿನ ಮೆರವಣಿಗೆ ಗುರುವಾರ ಸಂಜೆ ನಡೆಯಿತು.
ಗಂಗೊಳ್ಳಿ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಸಾಮಾಜಿಕ ಕಾರ್ಯಕರ್ತ ಆದರ್ಶ ದಿಕ್ಸೂಚಿ ಭಾಷಣ ಮಾಡಿದರು. ಉದ್ಯಮಿ ಕಾರ್ತಿಕ್ ಶೇಟ್ ಅಧ್ಯಕ್ಷತೆ ವಹಿಸಿದ್ದರು. ಹಿಂಜಾವೇ ಜಿಲ್ಲಾ ಪ್ರಮುಖ್ ಶಂಕರ ಕೋಟ, ಹಿಂಜಾವೇ ಗಂಗೊಳ್ಳಿ ಘಟಕ ಸಂಚಾಲಕ ಮೋಹನ ಖಾರ್ವಿ ಉಪಸ್ಥಿತರಿದ್ದರು. ಮೀನುಗಾರರ ಸಹಕಾರಿ ಸಂಘ ನಿರ್ದೇಶಕ ರಾಜೇಶ ಸಾರಂಗ್ ಉದ್ಘಾಟಿಸಿದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭಾಗವಹಿಸಿದ್ದರು. ಹಿಂಜಾವೇ ಗಂಗೊಳ್ಳಿ ಘಟಕ ಸಂಚಾಲಕ ಯಶವಂತ ಖಾರ್ವಿ ನಿರೂಪಿಸಿದರು. ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ, ಬೈಂದೂರು ಸರ್ಕಲ್ ಇನ್‌ಸ್ಪೆಕ್ಟರ್ ಸವಿತ್ರತೇಜ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಹರೀಶ್ ಆರ್., ವಿವಿಧ ಠಾಣೆ ಉಪನಿರೀಕ್ಷಕರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net