ಹಿರಿಯರ ಮೌಲ್ಯ ಅನುಸರಣೆ ಅಗತ್ಯ

flag
ಸಾಹೇಬರಕಟ್ಟೆ ಮಹಾತ್ಮಾಗಾಂಧಿ ಪ್ರೌಢ ಶಾಲೆ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಬ್ರಹ್ಮಾವರ ಬಾರ್ಕೂರು ಅಧ್ಯಕ್ಷ ಲಯನ್ ಜಯರಾಮ್ ನಾಯಕ್ ಧ್ವಜಾರೋಹಣ ನೆರವೇರಿಸಿದರು
Published on

ಕೊಕ್ಕರ್ಣೆ: ನಾವಿಂದು ಪಡೆದುಕೊಂಡ ಸ್ವಾತಂತ್ರೃದ ಹಿನ್ನೆಲೆಯಲ್ಲಿ ಹಲವಾರು ಜನರ ತ್ಯಾಗ, ಬಲಿದಾನ, ನೆರವು ಇದೆ. ಹಿರಿಯರು ಅನುಸರಿಸಿಕೊಂಡು ಬಂದ ಮೌಲ್ಯ ಅನುದಿನ, ಅನುಕ್ಷಣ ಅನುರಣಿಸಬೇಕಾದ ಅಗತ್ಯತೆ ನಮ್ಮ ಮುಂದಿದೆ ಎಂದು ಲಯನ್ಸ್ ಕ್ಲಬ್ ಬ್ರಹ್ಮಾವರ ಬಾರ್ಕೂರು ಅಧ್ಯಕ್ಷ ಲಯನ್ ಜಯರಾಮ್ ನಾಯಕ್ ಹೇಳಿದರು.

ಸಾಹೇಬರಕಟ್ಟೆ ಮಹಾತ್ಮಾಗಾಂಧಿ ಪ್ರೌಢಶಾಲೆ ಆಶ್ರಯದಲ್ಲಿ ಸಂಸ್ಥೆ ದತ್ತು ಸ್ವೀಕರಿಸಿದ ಲಯನ್ಸ್ ಕ್ಲಬ್ ಬ್ರಹ್ಮಾವರ ಬಾರ್ಕೂರು ಸಹಯೋಗದೊಂದಿಗೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಲಯನ್ಸ್ ಕ್ಲಬ್ ಬ್ರಹ್ಮಾವರ ಬಾರ್ಕೂರು ಉಪಾಧ್ಯಕ್ಷ ಲಯನ್ ಸುದೇಶ ಹೆಗ್ಡೆ, ಕಾರ್ಯದರ್ಶಿ ಐವನ್ ದೋನಾಥ್ ಸುವಾರಿಸ್, ಖಜಾಂಚಿ ಸಂತೋಷ್ ಕೋಟ್ಯಾನ್, ಆನಂದ ಶೆಟ್ಟಿ, ಶೇಖರ ಶೆಟ್ಟಿ, ಜಯರಾಮ ಹೆಗ್ಡೆ, ಆನಂದ ಗಾಣಿಗ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವೀಂದ್ರನಾಥ್ ಶೆಟ್ಟಿ ಕೊಳ್ಕೆಬೈಲು, ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಕೊಳ್ಕೆಬೈಲು, ಮುಖ್ಯ ಶಿಕ್ಷಕ ಸತೀಶ್ ನಾಯಕ್, ಶಿಕ್ಷಕ ವೃಂದ ಮತ್ತಿತರರು ಉಪಸ್ಥಿತರಿದ್ದರು. ಸಹಶಿಕ್ಷಕಿ ಯಶೋದಾ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವಿಜಯ್ ಕುಮಾರ್ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net