ಪರಿಸರ ಸಂರಕ್ಷಣೆ ಸರ್ವರ ಕರ್ತವ್ಯವಾಗಲಿ

duty, environment, conservation,
Published on

ಚಳ್ಳಕೆರೆ: ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ಆಚರಿಸುವಂತಾಗಬೇಕು. ಆಗ ಮಾತ್ರ ಪರಿಸರ ಸಮತೋಲನ ಕಾಪಾಡಲು ಸಾಧ್ಯ ಎಂದು ಹೊಂಗಿರಣ ಶಾಲಾ ಅಧ್ಯಕ್ಷ ಬಿ.ನಾಗಪ್ಪ ಹೇಳಿದರು.

ಅರಣ್ಯ ಇಲಾಖೆ ಸಹಯೋಗದಲ್ಲಿ ಪರಿಸರ ದಿನಾಚರಣೆ ನಿಮಿತ್ತ ನಗರದ ಹೊಂಗಿರಣ ಶಾಲಾ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅರಣ್ಯ ಇಲಾಖೆ ಅಧಿಕಾರಿ ರಾಜೇಶ್ ಮಾತನಾಡಿ, ಪ್ರಾಕೃತಿಕ ವಿಕೋಪಗಳ ನಡುವೆ ಗಿಡ ಬೆಳೆಸುವುದು ಒಂದು ಸವಾಲಿನ ಕೆಲಸವಾಗಿದೆ.

ಪ್ರಸ್ತುತ ವಾಡಿಕೆ ಮಳೆಯ ಪ್ರಮಾಣವೂ ಕಡಿಮೆ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಶಾಲಾ-ಕಾಲೇಜುಗಳ ಆವರಣದಲ್ಲಿ ಗಿಡ ಬೆಳೆಸಲು ಇಲಾಖೆ ಸಹಕರಿಸುತ್ತದೆ.

ಇದು ಸದುಪಯೋಗ ಆಗುವ ರೀತಿಯಲ್ಲಿ ಪ್ರತಿದಿನ ನೀರು ಹಾಕಿ ಗಿಡ ಬೆಳೆಸುವ ಜವಾಬ್ದಾರಿ ಬಹಳ ಮುಖ್ಯ ಎಂದು ಕಿವಿಮಾತು ಹೇಳಿದರು.

ಶಾಲೆಯ ಕಾರ್ಯದರ್ಶಿ ದಯಾನಂದ್, ಮುಖ್ಯಶಿಕ್ಷಕ ಡಿ.ಎಸ್.ಪ್ರಸಾದ್, ಶೈಲಜಾ, ಮಧುಸೂದನ್, ದೈಹಿಕ ಶಿಕ್ಷಣ ಶಿಕ್ಷಕ ಮೋಹನ್ ಕೊರ‌್ಲಕುಂಟೆ, ಸಿದ್ದೇಶ್, ಶಾಂತಕುಮಾರ್, ರಘು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net