

ಹಾಸನ: ಮಕ್ಕಳಲ್ಲಿ ದೇಶೀಯ ಪರಂಪರೆ ಹಾಗೂ ದಸರಾ ಬೊಂಬೆಗಳ ಹಿನ್ನೆಲೆ ಮತ್ತು ಮಹತ್ವವನ್ನು ತಿಳಿಸಿಕೊಡುವ ಉದ್ದೇಶದಿಂದ ನಗರದ ಎಸ್‌ಆರ್‌ಎಸ್ ಪ್ರಜ್ಞಾ ವಿದ್ಯಾ ಶಾಲೆಯಲ್ಲಿ ಸೋಮವಾರ ದಸರಾ ಬೊಂಬೆ ಸಂಭ್ರಮ-2025 ಅನ್ನು ಸಾಂಪ್ರದಾಯಿಕವಾಗಿ ಆಯೋಜಿಸಲಾಗಿತ್ತು.
ಮಕ್ಕಳು ತಂದಿದ್ದ ಪಾರಂಪರಿಕ ದಸರಾ ಗೊಂಬೆಗಳನ್ನು ಶಿಕ್ಷಕರು ಅಲಂಕಾರಿಕವಾಗಿ ಮತ್ತು ಸೃಜನಾತ್ಮಕವಾಗಿ ಜೋಡಿಸಿ ವೀಕ್ಷಿಸಲು ಅನುವು ಮಾಡಿಕೊಟ್ಟರು. ಮಕ್ಕಳಿಗೆ ದಸರಾ ಬೊಂಬೆ ಸಂಭ್ರಮದ ಮಹತ್ವ ಹಾಗೂ ದಸರಾ ಬೊಂಬೆಗಳ ವಿಶೇಷದ ಕುರಿತು ವಿವರಿಸಿದರು.