

ಶಿರಹಟ್ಟಿ: ಪ್ರಸಕ್ತ ಸಾಲಿನ ಶಿರಹಟ್ಟಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸೆ. 12ರಂದು ಬೆಳಗ್ಗೆ 9ಕ್ಕೆ ಪಟ್ಟಣದ ಎಸ್.ಎಂ. ಡಬಾಲಿ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಕ್ರೀಡಾಕೂಟದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ (ಅಥ್ಲೆಟಿಕ್ಸ್ ಆಟಗಳಾದ) 100 ಮೀ.,. 200 ಮೀ., 400 ಮೀ., 800 ಮೀ., 1500 ಮೀ. ಹಾಗೂ ಉದ್ದ, ಎತ್ತರ, ತ್ರಿವಿಧ ಜಿಗಿತ, ಗುಂಡು, ಜಾವೆಲಿನ್, ಚಕ್ರ ಎಸೆತ, ಹಾಗೂ 4* 100 ಮೀ. ಮತ್ತು 4* 400 ಮೀ. ರಿಲೆ ಹಾಗೂ ವಾಲಿಬಾಲ್, ಕಬಡ್ಡಿ, ಖೋ ಖೋ ಗುಂಪು ಆಟಗಳು ನಡೆಯಲಿವೆ.
ತಾಲೂಕಿನ ಆಸಕ್ತ ಕ್ರೀಡಾಪಟುಗಳು ಹೆಚ್ಚಿನ ಮಾಹಿತಿಗೆ ಎಂ.ಡಿ. ತಳ್ಳಳ್ಳಿ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಶಿರಹಟ್ಟಿ ಅವರನ್ನು ಸಂರ್ಪಸಲು ಕೋರಲಾಗಿದೆ.