

ವಿಜಯವಾಣಿ ಸುದ್ದಿಜಾಲ ಕೋಟ
ಕ್ರೀಡೆ ಮನಸ್ಸಿನ ತಳಮಳ ನಿವಾರಿಸಿ ಸಂತೋಷ ಹೆಚ್ಚಿಸುವುದರ ಜತೆಗೆ ದೇಹಕ್ಕೆ ವ್ಯಾಯಾಮ ನೀಡುತ್ತದೆ ಎಂದು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ಶುಭಚಂದ್ರ ಹತ್ವಾರ ಹೇಳಿದರು.
ಕುಂಭಾಸಿ ಶ್ರೀ ನಾಗಾಚಲ ಅಯ್ಯಪ್ಪ ಸ್ವಾಮಿ ಮತ್ತು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕ್ಷೇತ್ರದಲ್ಲಿರುವ ಶ್ರೀ ಭಾರತೀ ತೀರ್ಥ ಸಭಾಭವನದಲ್ಲಿ ದ್ರಾವಿಡ ಬ್ರಾಹ್ಮಣ ಪರಿಷತ್‌ನ ಕುಂಭಾಸಿ ವಲಯ ಆಯೋಜಿಸಿದ್ದ ದಸರಾ ಕ್ರೀಡಾಕೂಟದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದ್ರಾವಿಡ ಬ್ರಾಹ್ಮಣ ಪರಿಷತ್ತಿನ ತಾಲೂಕಿನ ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ ಮಾತನಾಡಿದರು. ಕುಂಭಾಸಿ ವಲಯಾಧ್ಯಕ್ಷ ರಮೇಶ್ ಚಾತ್ರ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವೇದಿಕೆಯ ಅಧ್ಯಕ್ಷೆ ಸಂಧ್ಯಾ ಉಡುಪ, ವಲಯದ ಗೌರವಾಧ್ಯಕ್ಷ ವಾದಿರಾಜ ಹತ್ವಾರ, ಯುವ ವಿಪ್ರ ವೇದಿಕೆಯ ಅಧ್ಯಕ್ಷ ವಾದಿರಾಜ್ ಉಪಾಧ್ಯಾಯ ಉಪಸ್ಥಿತರಿದ್ದರು.
ಶ್ರೀಧರ ಭಟ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸುಧಾ ಉಪಾಧ್ಯಾಯ, ಸುಮಾ ವಾಮನ್ ಮತ್ತು ನಿಶ್ಮಿತಾ ಪ್ರಾರ್ಥಿಸಿದರು. ಲಕ್ಷ್ಮೀ ನಾರಾಯಣ ವೈದ್ಯ ಸ್ವಾಗತಿಸಿದರು. ಸುಪ್ರೀತಾ ಪುರಾಣಿಕ ನಿರೂಪಿಸಿದರು. ರಾಘವೇಂದ್ರ ಪುರಾಣಿಕ ವಂದಿಸಿದರು. ಬಡಾಕೆರೆ ಲೋಕೇಶ ಅಡಿಗ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಯಕ್ಷಗಾನ ಕಲಾವಿದೆ ವಂದನಾ ಹೆಬ್ಬಾರ್ ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಪಡೆದ ನಮೃತಾ ಅವರನ್ನು ಅಭಿನಂದಿಸಲಾಯಿತು.