ಸಂತೇಬೆನ್ನೂರಿನಲ್ಲಿ ಸಂಭ್ರಮದ ಶ್ರೀ ದುರ್ಗಾಂಬಿಕಾ ರಥೋತ್ಸವ

011
ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮ ದೇವತೆ ಶ್ರೀ ದುರ್ಗಾಂಬಿಕಾ ದೇವಿ ರಥೋತ್ಸವ ಅದ್ದೂರಿಯಾಗಿ ನಡೆಯಿತು.
Published on

ಚನ್ನಗಿರಿ: ತಾಲೂಕು ಸಂತೇಬೆನ್ನೂರು ಗ್ರಾಮ ದೇವತೆ ಶ್ರೀ ದುರ್ಗಾಂಬಿಕಾ ದೇವಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಸಂಭ್ರಮದಿಂದ ನೆರವೇರಿತು. ಗ್ರಾಮದಲ್ಲಿ ವಿಶೇಷ ಪೂಜೆಗಳು ನಡೆದವು.

ಗ್ರಾಮದ ಕೋಟೆ ರಸ್ತೆಯ ದೇವಾಲಯ ಆವರಣದಲ್ಲಿದ್ದ ಅಲಂಕೃತ ರಥದಲ್ಲಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಯಿತು. ನಂತರ ರಥದ ಗಾಲಿಗೆ ಪೂಜೆ ಸಲ್ಲಿಸಲಾಯಿತು. ರಥವನ್ನು ಕರಿಗಲ್ಲಿನಿಂದ ಪುಷ್ಕರಣಿಯ ಕರಿಗಲ್ಲುವರೆಗೆ ಎಳೆದು ತರಲಾಯಿತು.

ಜಾನಪದ ಕಲಾಮೇಳಗಳು, ವಾದ್ಯಗಳು ಉತ್ಸವಕ್ಕೆ ಮೆರುಗು ತಂದವು. ರಥೋತ್ಸವದ ನಿಮಿತ್ತ ಗ್ರಾಮದ ಬೀದಿಗಳು ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದವು.

ದೇವರಿಗೆ ಅಭಿಷೇಕ, ಅಂಕುರದರ್ಪಣ, ಅಷ್ಟಾವಧಾನ ಸೇವೆ, ರಕ್ಷಾಬಂಧನ ಹಾಗೂ ಪಲ್ಲಕ್ಕಿ ಉತ್ಸವಗಳು ನಡೆದವು. ದೇವರ ಕಳಸ ಸ್ಥಾಪನೆ, ಧ್ವಜಾರೋಹಣ, ನವಗ್ರಹ ಸ್ಥಾಪನೆ, ಗಜೇಂದ್ರೋತ್ಸವ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net