ಕೋಟ ದೇಗುಲದಲ್ಲಿ ಸಪ್ತಶತಿ ಪಾರಾಯಣ, ದುರ್ಗಾಹೋಮ

degula
ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಒಂಭತ್ತನೆ ದಿನದ ನವರಾತ್ರಿ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಕೋಟ ಪಡುಕರೆ ಕರಾವಳಿ ಓಷಿಯನ್ ಪ್ರಾಡಕ್ಟ್ ಮಾಲೀಕರಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಹಾಗೂ ಲೋಹಿತ್ ಮಲ್ಪೆ ಅವರ ಕುಟುಂಬಿಕರನ್ನು ಗೌರವಿಸಲಾಯಿತು
Published on

ಕೋಟ: ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಶರನ್ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು, ಒಂಬತ್ತನೇ ದಿನದ ನವರಾತ್ರಿ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಕೋಟ ಪಡುಕರೆ ಕರಾವಳಿ ಓಷಿಯನ್ ಪ್ರಾಡಕ್ಟ್ ಮಾಲೀಕ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಹಾಗೂ ಲೋಹಿತ್ ಮಲ್ಪೆ ಅವರ ಕುಟುಂಬಿಕರು ಚಂಡಿಕಾ ಸಪ್ತಶತಿ ಪಾರಾಯಣ, ದುರ್ಗಾಹೋಮದಲ್ಲಿ ಸೇವಾಕರ್ತರಾಗಿ ಭಾಗಿಯಾದರು.

ದೇಗುಲದ ಧಾರ್ಮಿಕ ವಿಧಿವಿಧಾನ ಮಧುಸೂಧನ ಬಾಯರಿ ನೇತೃತ್ವದಲ್ಲಿ ಜರುಗಿತು. ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ.ಕುಂದರ್ ಸಂಸದರ ಕುಟುಂಬಿಕರಿಗೆ ಪ್ರಸಾದ ವಿತರಿಸಿ ಗೌರವಿಸಿದರು. ಅಪರಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಜನರು ಭಾಗಿಯಾದರು. ಸಂಜೆ ವಿವಿಧ ಭಜನಾ ತಂಡಗಳಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net