ಗುಡಗೇರಿ ಗ್ರಾಮದಲ್ಲಿ ದುರ್ಗಾದೇವಿ ಮೆರವಣಿಗೆ ವಿಜೃಂಭಣೆ

FESTIVAL
ಅಳವಂಡಿ ಸಮೀಪದ ಗುಡಗೇರಿಯಲ್ಲಿ ಶ್ರೀ ದುರ್ಗಾದೇವಿ ಅಡ್ಡಪಲ್ಲಕ್ಕಿ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಪ್ರಮುಖರಾದ ಯಂಕಣ್ಣ, ತಿಪ್ಪಣ್ಣ, ರವಿ, ವಿರೂಪಾಕ್ಷಿ, ಹೇಮರಡ್ಡಿ, ಬಸವರಾಜ, ಶರಣಪ್ಪ, ನಾಗಬಸಯ್ಯ ಇತರರಿದ್ದರು.
Published on

ಅಳವಂಡಿ: ಸಮೀಪದ ಗುಡಗೇರಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ನೂತನ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಾಗೂ ಮೆರವಣಿಗೆ ಶುಕ್ರವಾರ ಅದ್ದೂರಿಯಾಗಿ ಜರುಗಿತು.

ಬೆಳಗ್ಗೆ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಮೈನಳ್ಳಿ-ಬಿಕನಳ್ಳಿಯ ಶಿವಾಚಾರ್ಯರಿಂದ ಜರುಗಿತು. ಹೋಮ-ಹವನ, ವಿವಿಧ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ನಂತರ ಹೂಗಳಿಂದ ಅಲಂಕರಿಸಿದ ಅಡ್ಡಪಲ್ಲಕ್ಕಿಯಲ್ಲಿ ಶ್ರೀಮಾತೆ ಮೂರ್ತಿಯನ್ನಿರಿಸಿ ಕಳಸ-ಕುಂಭ ಹೊತ್ತ ಮಹಿಳೆಯರು, ಡೊಳ್ಳು, ಭಜನೆ ಇತರ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಪ್ರಮುಖರಾದ ತಿಪ್ಪಣ್ಣ ತೋಟದ, ಮಹಾಂತೇಶ ಹಿರೇಮಠ, ರವಿ ಅಂಬಳಿ, ವಿರುಪಾಕ್ಷಿ ಬನ್ನಿಕೊಪ್ಪ, ಹೇಮರಡ್ಡಿ ತೋಟದ, ವೆಂಕಣ್ಣ ಆಡೂರು, ಸಣ್ಣ ಹನುಮಪ್ಪ ಬಳ್ಳಾರಿ, ಶರಣಪ್ಪ ಬಳ್ಳಾರಿ, ಸಿದ್ದಪ್ಪ ಬಳ್ಳಾರಿ, ಶರಣಪ್ಪ ತೋಟದ, ಬಸವರಾಜ ವುಟಗನೂರು, ಶರಣಪ್ಪ ವುಟಗನೂರು, ಬಸವರಾಜ ಆಡೂರು, ಶರಣಪ್ಪ ಆಡೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net