

ಗುರುಗುಂಟಾ: ಸಕಾಲಕ್ಕೆ ಮುಂಗಾರು ಮಳೆ ಸುರಿಯದ ಕಾರಣ ಸಮೀಪದ ಗೌಡೂರು ತಾಂಡಾದ ರೈತರು ಗ್ರಾಮದೇವತೆ ದುರ್ಗಾದೇವಿಯ ಮೊರೆ ಹೋಗಿದ್ದಾರೆ. ಊರಭಾವಿಯಿಂದ ದುರ್ಗಾದೇವಿ ದೇವಸ್ಥಾನದವರೆಗೆ ಸಾಲಾಗಿ ನಿಂತು 501 ರೈತರು 101 ಕೊಡಗಳಿಂದ ಮಂಗಳವಾರ ದೇವಿ ಮೂರ್ತಿಗೆ ಜಲಾಭಿಷೇಕ ಮಾಡಿದರು. ಮುಂಗಾರು ಮಳೆಗೂ ಮುನ್ನ ಸುರಿದ ಆಶಾದಾಯಕ ವರ್ಷಧಾರೆಯಿಂದ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಸಕಾಲಕ್ಕೆ ಮಳೆ ಸುರಿಯದ ಕಾರಣ ಜಮೀನಿನಲ್ಲಿ ಬಿತ್ತಿದ ಹತ್ತಿ, ಸಜ್ಜೆ, ತೊಗರಿ ಬೆಳೆಗಳು ಬಾಡುತ್ತಿವೆ. ಆದ್ದರಿಂದ ವಿಶೇಷ ಪೂಜೆ ಫಲ ನೀಡಬಹುದು ಎನ್ನುವ ಭರವಸೆಯೊಂದಿಗೆ ಗ್ರಾಮದೇವತೆ ದುರ್ಗಾದೇವಿಯ ಮೊರೆ ಹೋಗಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು.