ದುರ್ಗಾದೇವಿ ಜಾತ್ರಾ ಮಹೋತ್ಸವ ನಾಳೆಯಿಂದ

19mamadapur1
Published on

ಮಮದಾಪುರ: ಸಮೀಪದ ಕೊಳವಿ ಬೆಣಚಿನಮರಡಿ(ಹುಲಿಕಟ್ಟಿ ಕ್ರಾಸ್​) ನಲ್ಲಿ ಏ.21 ರಿಂದ 23ರ ವರೆಗೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಜರುಗಲಿದೆ. ಏ.21 ರಂದು ಹಲಗಿವಾದನ ಸೇವೆ, ಮನರಂಜನೆ ಕಾರ್ಯಕ್ರಮ, ಭಜನೆ, ಡೊಳ್ಳಿನ ಪದ, ಚೌಡಕಿ ಪದ ಹಾಗೂ ಅಗ್ನಿಪೂಜೆ ನೆರವೇರಲಿದೆ. ಏ.22 ರಂದು ಬೆಳಗ್ಗೆ 6 ಗಂಟೆಗೆ ಶ್ರೀದುರ್ಗಾದೇವಿ ಗದ್ದುಗೆಗೆ ಪೂಜೆ, ಅಭಿಷೇಕ, ನೈವೇದ್ಯ ಸಮರ್ಪಣೆ, ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಧ್ಯಾಹ್ನ 12 ಗಂಟೆಗೆ ಮನ್ನಿಕೇರಿ ಮಹಾಲಿಂಗೇಶ್ವರ ಮಠದ ವಿಜಯ ಸಿದ್ದೇಶ್ವರ ಸ್ವಾಮೀಜಿ, ಕಮಲಮ್ಮ ಪೂಜೇರಿ ಸಾನ್ನಿಧ್ಯದಲ್ಲಿ ಧರ್ಮಸಭೆ ಜರುಗಲಿದೆ. ಶ್ರೀ ದುರ್ಗಾದೇವಿ ಗ್ರಾಮದ ಭಕ್ತರ ಮನೆ ಮನೆಗೆ ತೆರಳಿ ಉಡಿ ತುಂಬಿಸಿಕೊಳ್ಳುವ ಕಾಯಕ್ರಮ ಸಂಜೆ 4 ಗಂಟೆಗೆ ಅಗ್ನಿ ಪ್ರವೇಶ ಹಾಗೂ ಅನ್ನ ಸಂತರ್ಪಣೆ ಜರುಗಲಿದೆ. ಏ.23ರಂದು ಬೆಳಗ್ಗೆ ದೇವಿ ಗದ್ದಿಗೆಗೊಳಿಸುವುದು ಹಾಗೂ ವಿವಿಧ ಧಾರ್ಮಿಕ ನೆರವೇರಲಿವೆ ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net