

ಬಾಗೂರು: ಕತ್ತರಿಘಟ್ಟದ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದಲ್ಲಿ ಮಂಗಳವಾರ ನಾಡಿನ ಜನರ ಸುಭೀಕ್ಷೆಗಾಗಿ ಚಂಡಿಕಾ ಹೋಮ ನಡೆಸಿ, ಮುತ್ತೈದೆಯರಿಗೆ ಬಾಗಿನ ನೀಡಲಾಯಿತು.
ತಾಲೂಕಿನ ದಂಡಿಗನಹಳ್ಳಿ ಹೋಬಳಿ, ಕತ್ತರಿಘಟ್ಟದಲ್ಲಿ ಶ್ರೀ ಚಂದ್ರಶೇಖರ್ ಗುರೂಜಿ ಸ್ಥಾಪಿಸಿರುವ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದಲ್ಲಿ ದುರ್ಗಾಷ್ಟಮಿಯ ದಿನವಾದ ಮಂಗಳವಾರ ಚಂಡಿಕಾ ಹೋಮ ಏರ್ಪಡಿಸಲಾಗಿತ್ತು. ಬೆಳಗ್ಗೆ ಕನ್ಯಾಪೂಜೆ, ಸಂಕಲ್ಪ, ನವದೇವತೆಗಳಿಗೆ 12 ಪರಾಯಣ ಪಠಿಸಿ, ಎಲ್ಲ ದೇವತೆಗಳನ್ನು ಪೂಜಿಸಿ, ಚಂಡಿಕಾ ಹೋಮ ನಡೆಸಿ, ಪೂರ್ಣಾಹುತಿ ಸಲ್ಲಿಸಲಾಗಿದೆ. ಮತ್ತು 25 ಮುತ್ತೈದೆಯರಿಗೆ ಬಾಗಿನ ಅರ್ಪಿಸಲಾಯಿತು. ಈ ವರ್ಷವೂ ನಾಡಿನಲ್ಲಿ ಯಾವುದೇ ಅವಘಡ ಆಗದಂತೆ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಲಾಯಿತು.
ಈ ವೇಳೆ ಜಿ.ಪಂ. ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ, ತಾಲೂಕಿನ ವಿವಿಧ ಗಣ್ಯರು ಹೋಮದಲ್ಲಿ ಭಾಗಿಯಾಗಿದ್ದರು.