ಮಳೆಯ ರಭಸಕ್ಕೆ 'ನಮ್ಮ ಮೆಟ್ರೋ' ಹಳಿ ಮೇಲೆ ಬಿದ್ದ ಮರದ ಕೊಂಬೆ! ನಿಲ್ದಾಣದಲ್ಲೇ ಕಾದು ಕುಳಿತ ಪ್ರಯಾಣಿಕರು

Untitled design (26)
Published on

ಬೆಂಗಳೂರು: ಇಂದು ಸಹ ರಾಜ್ಯ ರಾಜಧಾನಿಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಮಳೆಯ ಅವಾಂತರಕ್ಕೆ ಟ್ರಿನಿಟಿ ಮೆಟ್ರೋ ನಿಲ್ದಾಣದ ಪಕ್ಕವಿದ್ದ ಮರವೊಂದು ಉರುಳಿ ಬಿದ್ದಿದ್ದು, ಅದರ ರೆಂಬೆ, ಕೊಂಬೆಗಳು ರೈಲು ಹಳಿಯ ಮೇಲೆ ಬಿದ್ದಿದೆ. ಇದರಿಂದ ನಮ್ಮ ಮೆಟ್ರೋ ಪರ್ಪಲ್​ ಲೈನ್​ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.

ಟ್ರಿನಿಟಿ ನಿಲ್ದಾಣದಿಂದ ಮಹಾತ್ಮ ಗಾಂಧಿ ರಸ್ತೆ ಮಾರ್ಗದ ಹಳಿಯ ಮೇಲೆ ಉರುಳಿದ್ದು, ರೆಂಬೆ, ಕೊಂಬೆಗಳು ಹಳಿಯ ತುಂಬ ಹರಡಿವೆ. ಇದರಿಂದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿರುವುದು ಸದ್ಯ ಪ್ರಯಾಣಿಕರಿಗೆ ಭಾರೀ ಸಮಸ್ಯೆಯಾಗಿದೆ. ಮಾಹಿತಿ ತಿಳಿದ ಕೆಲವು ಪ್ರಯಾಣಿಕರು ಅಲ್ಲಿಂದ ತಮ್ಮ ಮಾರ್ಗ ಬದಲಾಯಿಸಿದರೆ, ಇನ್ನೂ ಕೆಲವರು ನಿಲ್ದಾಣದಲ್ಲೇ ಕೆಲ ಸಮಯ ಕಾದಿದ್ದಾರೆ.

ಇನ್ನು ಇಂದು ಸುರಿದ ಮಳೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಹಲವಾರು ಬೃಹತ್ ಮರಗಳು ಧರೆಗೆ ಉರುಳಿದ್ದು, ರಸ್ತೆ ಸಂಚಾರಕ್ಕೆ ಭಾರೀ ತೊಂದರೆ ಉಂಟುಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net