

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಖಂಡಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಕಲಬುರಗಿಯಲ್ಲಿ ಬುಧವಾರ ಅರೆಬೆತ್ತಲೆ ಮೆರವಣಿಗೆ ನಡೆಸಿದರು.
ಕೇಂದ್ರ ಬಿಜೆಪಿ ಸರ್ಕಾರ ಇಡಿ, ಐಟಿ, ಸಿಬಿಐ ಮತ್ತು ರಾಜಭವನಗಳನ್ನು ರಾಜಕೀಯ ಉz್ದೆÃಶಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಸಂಚಿಗೆ ಸಿಎಂ ಸಿದ್ದರಾಮಯ್ಯ ಒಳಗಾಗದಂತೆ ಪ್ರಜಾಪ್ರಭುತ್ವವಾದಿಗಳು ಜಾಗೃತರಾಗಬೇಕಿದೆ ಎಂದು ಸಮಿತಿ ಜಿಲ್ಲಾ ಮುಖಂಡ ಸುರೇಶ ಹಾದಿಮನಿ ಹೇಳಿದರು.
ಉನ್ನತ ಅಧಿಕಾರದಲ್ಲಿದ್ದು, ರಾಜಧರ್ಮ ಮರೆತು ಜಾತಿ, ಧರ್ಮದ ಹೆಸರಿನಲ್ಲಿ ಜನಾಂಗೀಯ ಹತ್ಯೆ ತಡೆಯಲು ಬಿಜೆಪಿಯವರು ವಿಫಲರಾಗಿದ್ದಾರೆ. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಕೋಮುವಾದಕ್ಕೆ ಸಿದ್ದರಾಮಯ್ಯ ತಡೆಗೋಡೆಯಂತಿದ್ದಾರೆ. ನಿತ್ಯ ಹಿಂದು, ಮುಸ್ಲಿಂ, ಮಂದಿರ, ಮಸೀದಿ, ಜಿಹಾದ್, ಬುರ್ಕಾದಂತ ಸಂಗತಿಗಳನ್ನು ಮುಂದಿಟ್ಟುಕೊAಡು ಮೌಲಿಕ ಅಂಶಗಳನ್ನು ಗಾಳಿಗೆ ತೂರುತ್ತಿದೆ ಎಂದು ದೂರಿದರು.
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮೇಲೆ ಬಂದಿರುವ ಆರೋಪ ಎದುರಿಸುವುದಾಗಿಯೂ ಅವರು ಹೇಳಿದ್ದಾರೆ. ರಾಜಕೀಯ ಭ್ರಷ್ಟಾಚಾರ, ಸ್ವಜನಪಕ್ಷಪಾತ, ವಂಶಪಾರAಪರ್ಯ ರಾಜಕಾರಣಕ್ಕೆ ಪೂರ್ಣವಿರಾಮ ಹಾಕುವುದಾಗಿ ಹೇಳಿ ಜನರ ವಿಶ್ವಾಸಗಳಿಸಿ ಅಧಿಕಾರ ಪಡೆದ ಪಕ್ಷ ಏನು ಮಾಡಿದೆ ? ಭಷ್ಟಾಚಾರದ ರೂವಾರಿಗಳನ್ನು ತನ್ನ ಪಕ್ಷಕ್ಕೆ ಸೇರಿಸಿಕೊಂಡಿತು. ಜಾರ್ಖಂಡ್ ಮತ್ತು ದಿಲ್ಲಿ ಸಿಎಂ ಅವರನ್ನು ಯಾವ ರೀತಿ ನಡೆಸಿಕೊಳ್ಳಲಾಯಿತು. ತಪ್ಪಾಗಿದ್ದರೆ ಕಾನೂನು ಇದೆ, ವಿಚಾರಣೆ ಆಗಲಿ. ಆದರೆ ಇದೆಲ್ಲಕ್ಕೂ ಮುನ್ನ ಅಸ್ಥಿರಗೊಳಿಸುವ ಸಂಚು ಖಂಡನೀಯ ಎಂದರು.
ಕೇAದ್ರ ಬಿಜೆಪಿ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ, ಪ್ರಬಲ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ದುರ್ಬಲಗೊಳಿಸಲು ಹೊರಟಿರುವುದು, ಮುಡಾ ಪ್ರಕರಣದಲ್ಲಿ ಚುನಾಯಿತ ಸರ್ಕಾರ ಪತನಗೊಳಿಸಲು ಬಿಜೆಪಿ-ಜೆಡಿಎಸ್ ನಡೆಸಿರುವ ಸಂಚು ಖಂಡನೀಯ.
ನಗರದ ಜಗತ್ ವೃತ್ತದಿಂದ ಮುಖ್ಯರಸ್ತೆ, ಸರ್ದಾರ್ ಪಟೇಲ್ ವೃತ್ತದ ಮಾರ್ಗವಾಗಿ ಮಿನಿ ವಿಧಾನಸೌಧಕ್ಕೆ ಆಗಮಿಸಿ, ರಾಷ್ಟçಪತಿಗಳಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದರು. ಸುರೇಶ ಹಾದಮನಿ, ಬಿ.ಸಿ.ವಾಲಿ, ಹೆಚ್.ಶಂಕರ್, ಉಮೇಶ ನರೋಣಾ, ರೇವಣಸಿದ್ದಪ್ಪ ಜಾಲಿ, ಪವನಕುಮಾರ ವಳಕೇರಿ, ರಾಜು ಸಂಕಾ, ಶಿವಪುತ್ರ ಜವಳಿ, ಕೃಷ್ಣಪ್ಪ ಕರಣಿಕ್, ಮಲ್ಲಣ್ಣ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.