ಗ್ರಾಮಗಳ ಮಟ್ಟದಿಂದ ದಸಂಸ ಕಟ್ಟಬೇಕಿದೆ

25-pnp 4
Published on

ಪಾಂಡವಪುರ: ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್, ಪ್ರೊ.ಬಿ.ಕೃಷ್ಣಪ್ಪ ಅವರ 86ನೇ ಜನ್ಮ ದಿನಾಚರಣೆ ಹಾಗೂ ದಲಿತ ಚಳವಳಿ 50 ಸಂಭ್ರಮ ಕಾರ್ಯಕ್ರಮವನ್ನು ಆಚರಿಸಲಾಯಿತು.


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ದಸಂಸ ಮೈಸೂರು ವಿಭಾಗೀಯ ಸಂಚಾಲಕ ಡಿ.ಕೆ.ಅಂಕಯ್ಯ ಉದ್ಘಾಟಿಸಿ ಮಾತನಾಡಿ, ದಲಿತ ಸಂಘಟನೆಯನ್ನು ಗ್ರಾಮಗಳ ಮಟ್ಟದಿಂದ ಗಟ್ಟಿಯಾಗಿ ಕಟ್ಟಬೇಕಿದೆ. ದಲಿತ ಚಳವಳಿ ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುತ್ತಿದ್ದು, ಚಳವಳಿಯ ಅಗತ್ಯತೆ ಪ್ರಸ್ತುತವಾಗಿದೆ. ಚಳವಳಿಗಳು ಇಲ್ಲವಾಗಿದ್ದರೆ ಶೋಷಿತರನ್ನು ಕೇಳುವವರು ಇರುತ್ತಿರಲಿಲ್ಲ. ಸಂಘಟನೆ ಸಮಾಜದ ಜನರಿಗೆ ಆನ್ಯಾಯವಾದಗಲೆಲ್ಲ ಹೋರಾಡಿ ನ್ಯಾಯ ದೊರಕಿಸಿಕೊಟ್ಟಿದೆ. ದಲಿತ ಸಂಘಟನೆ ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಯಾರು ಶೋಷಣೆಗೆ ಒಳಪಡುತ್ತಾರೆ ಅವರ ಪರವಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದೆ ಎಂದು ಹೇಳಿದರು.


ಗಂಗಾರಾಮ್ ಚೆಂಡಾಳ್, ತಾಲೂಕು ಸಂಚಾಲಕ ರವಿ, ಮಂಜು, ಅರುಣ್‌ಕುಮಾರ್, ಯೋಗೇಶ್, ಕೆಂಪಯ್ಯ, ನೀಲಯ್ಯ, ಮರಿದೇವಯ್ಯ, ಅಶೋಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net