ಡಾರ್ಕ್‌ನೆಟ್‌ನಲ್ಲಿ ಬೆಂಗಳೂರಿಗೆ ಬರುತ್ತಿದ್ದ ಡ್ರಗ್ಸ್ ಪೇಪರ್

Dark net
Published on

ಬೆಂಗಳೂರು: ಡಾರ್ಕ್‌ನೆಟ್‌ನಲ್ಲಿ ವಿದೇಶದಿಂದ ಅಂಚೆ ಮೂಲಕ ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಇಬ್ಬರು ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬನಶಂಕರಿಯ ರಾಹುಲ್ ಮತ್ತು ದರ್ಶನ್ ಬಂಧಿತರು. 50 ಲಕ್ಷ ರೂ. ಮೌಲ್ಯದ 1 ಸಾವಿರ ಎಲ್‌ಎಸ್‌ಡಿ ಪೇಪರ್ ಸ್ಟ್ರಿಪ್ಸ್ ಗಳು, 2 ಮೊಬೈಲ್ ಹಾಗೂ 16 ಸಾವಿರ ರೂ. ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಡಾರ್ಕ್ ನೆಟ್ ಮೂಲಕ ವಿದೇಶದಲ್ಲಿ ಇರುವ ಪೆಡ್ಲರ್‌ಗಳ ಬಳಿ ಡ್ರಗ್ಸ್‌ ಖರೀದಿಸಿ ಕೊರಿಯರ್​ನಲ್ಲಿ ನಗರಕ್ಕೆ ತರಿಸಿಕೊಳ್ಳುತ್ತಿದ್ದರು. ಆನಂತರ ಆರೋಪಿಗಳು ತಮ್ಮ ಸಹಚರರ ಮೂಲಕ ವ್ಯಸನಿಗಳಿಗೆ ಮಾರಾಟ ಮಾಡುತ್ತಿದ್ದರು. ರಾಹುಲ್ ವೃತ್ತಿಪರ ಪೆಡ್ಲರ್ ಆಗಿದ್ದು, ಆತನ ಮೇಲೆ ಚನ್ನಮ್ಮನಕೆರೆ ಅಚ್ಚುಕಟ್ಟು ಸೇರಿ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಸಿಸಿಬಿ ಪೊಲೀಸರು ರಾಹುಲ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಹೊರ ಬಂದು ಮತ್ತೆ ತನ್ನ ದಂಧೆಯಲ್ಲಿ ನಿರತರಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net