ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಮಗನ ಬಗ್ಗೆ ರುದ್ರಪ್ಪ ಲಮಾಣಿಯ ಎಕ್ಸ್​ಕ್ಲೂಸಿವ್​ ಹೇಳಿಕೆ ಇಲ್ಲಿದೆ

RudrappaLamani DarshanLamani
Published on

ಹಾವೇರಿ: ಡ್ರಗ್ಸ್ ಕೇಸ್​ನಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ್​ ಲಮಾಣಿಯನ್ನು ಸಿಸಿಬಿ ಬಂಧಿಸಿದ್ದು, ಈ ಕುರಿತು 'ದಿಗ್ವಿಜಯ ನ್ಯೂಸ್​'ಗೆ ರುದ್ರಪ್ಪ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

'ರಾಣೇಬೆನ್ನೂರಲ್ಲೇ ಬಿಎ ಓದಿದ ಮಗ ಮನೆಯಲ್ಲಿ ನಮ್ಮ ಜತೆಯೇ ಇದ್ದ. ಬಿಎ ಪಾಸ್ ಆದ ನಂತರ ಎಲ್‌ಎಲ್​ಬಿ ಅಡ್ಮಿಷನ್ ಆಗಬೇಕು, ಕಾಲೇಜಿಗೆ ಹೋಗಬೇಕು ಎಂದು ರಾಣೇಬೆನ್ನೂರಿಗೆ ಬಂದಿದ್ದ. ನಮ್ಮ‌ ಮನೆಗೆ ಯಾವುದೋ ಒಂದು ಪಾಕೇಟ್​ನಲ್ಲಿ ಗಾಂಜಾ ಪೋಸ್ಟ್ ಬಂದಿದೆ. ಹಾಗಾಗಿ ಗೋವಾದಿಂದ ನನ್ನ ಮಗನನ್ನು ಕರೆದುಕೊಂಡು ಬಂದಿದ್ದಾರೆ. ನನ್ನ ಮಗನ ಜತೆ ನಾಲ್ಕೈದು ಜನರಿದ್ದಾರೆ...' ಎಂದು ರುದ್ರಪ್ಪ ಲಮಾಣಿ ಹೇಳಿದರು.

'ಈಗ ತನಿಖೆ ನಡೆಯುತ್ತಿದೆ. ನ್ಯಾಯಾಲಯ ಏನ್ ಮಾಡುತ್ತೋ ಅದಕ್ಕೆ ನಾವು ತಯಾರಿದ್ದೇವೆ. ನಮಗೇನೂ ಈ ಬಗ್ಗೆ ಗೊತ್ತಿಲ್ಲ. ಮಗ ಮನೇಲಿ ಇರ್ತಾ ಇದ್ದಾ.. ವಿರೋಧ ಪಕ್ಷದವರು ಏನೇನೋ ಮಾತಾಡಿದ್ದಾರೆ. ನಾನೇನು ಪ್ರತಿಕ್ರಿಯೆ ಕೊಡಲ್ಲ. ಅವರಿಗೆ ದೇವರು ಒಳ್ಳೇದು ಮಾಡಲಿ. ಮಕ್ಕಳು ಈ ರೀತಿ ಆಗಲಿ ಅಂತಾ ಯಾರೂ ಬಯಸಲ್ಲ. ಅವರಿಗೂ ಮಕ್ಕಳು ಇದಾರೆ.. ದೇವರು ನೋಡಿಕೊಳ್ತಾನೆ... ಈ ಬಗ್ಗೆ ನಾನೇನು ಹೆಚ್ಚು ಹೇಳಲ್ಲ ಎಂದು ರುದ್ರಪ್ಪ ಲಮಾಣಿ ಹೇಳಿದರು.

'ರುದ್ರಪ್ಪ ಲಮಾಣಿಯ ಇತಿಹಾಸವೇ ಕ್ರಿಮಿನಲ್' ಎಂದಿದ್ದ ಶಾಸಕ ನೆಹರು ಓಲೇಕಾರ್​ ಮಾತಿಗೆ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ ರುದ್ರಪ್ಪ, ಅವರಿಗೂ ಮಕ್ಕಳಿದ್ದಾರೆ. ರಾಜಕಾರಣವೇ ಬೇರೆ, ಮಕ್ಕಳೇ ಬೇರೆ. ಈ ಬಗ್ಗೆ ನೋಡಿಕೊಳ್ಳಲು ಕಾನೂನಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net