

ಬೆಂಗಳೂರು: ಡ್ರಗ್ಸ್ ವ್ಯಸನಿಯೊಬ್ಬನ ಕರ್ಮಕಾಂಡದ ಬಗ್ಗೆ ಆತನ ಪತ್ನಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ಈ ಸುದ್ದಿ ಎಂತಹವರನ್ನೂ ಬೆಚ್ಚಿಬೀಳಿಸುತ್ತೆ.
ಗಂಡನ ವಿಕೃತ ಮನಸ್ಥಿತಿ ಕುರಿತ ಕೇಸ್, ಬೆಂಗಳೂರಿನ ಪೂರ್ವ ವಿಭಾಗದ ಮಹಿಳಾ ಠಾಣೆಯಲ್ಲಿ ದಾಖಲಾಗಿದೆ. ಕೋರಮಂಗಲ ನಿವಾಸಿ ಲೋಹಿತ್ ವಿರುದ್ಧ ಈತನ ಪತ್ನಿಯೇ ದೂರು ದಾಖಲಿಸಿದ್ದಾರೆ.
ಲೋಹಿತ್ನ ಡ್ರಗ್ಸ್ ಚಟದಿಂದ ಈತನ ಪತ್ನಿಗೆ ಜೀವನವೇ ಸಾಕುಸಾಕು ಅನ್ನಿಸುವಷ್ಟು ಹಿಂಸೆಯಾಗಿದೆ. ಈ ಬಗ್ಗೆ ದೂರು ದಾಖಲಿಸಿರುವ ಪತ್ನಿ, 'ಮೊಬೈಲ್ ಮೇಲೆ ಕೊಕೇನ್ ಇಟ್ಟು ಹೇಗೆ ಎಳೀಬೇಕು? ಎಂದು ಹೇಳಿಕೊಟ್ತಿದ್ದ. ಡ್ರಗ್ಸ್ ಬಗ್ಗೆ ಬಲವಂತವಾಗಿ ಎಕ್ಸ್ಪ್ಲೇನ್ ಮಾಡ್ತಿದ್ದ. ಅವನು ಡ್ರಗ್ಸ್ ಸೇವಿಸುವ ದೃಶ್ಯವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡುವಂತೆ ಪೀಡಿಸುತ್ತಿದ್ದ. ಅಷ್ಟೇ ಅಲ್ಲ ಆ ದೃಶ್ಯವನ್ನು ಫೇಸ್ಬುಕ್ಗೆ ಹಾಕೋದಾಗಿ ಹೇಳುತ್ತಿದ್ದ. ಪತಿಯ ಮಾದಕ ಚಟಕ್ಕೆ ಅವರ ತಂದೆ-ತಾಯಿಯೇ ಸಪೋರ್ಟ್ ಮಾಡ್ತಾರೆ...' ಎಂದು ಸಂತ್ರಸ್ತೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
'ನನ್ನ ಪತಿ ಥಣಿಸಂದ್ರದಲ್ಲಿ ವಾಸವಿರುವ ನೀಗ್ರೋಗಳ ಬಳಿ ಕೊಕೇನ್ ಖರೀದಿಸುತ್ತಿದ್ದ. ತಾನು ಡ್ರಗ್ಸ್ ಚಟಕ್ಕೆ ಬಿದ್ದಿದ್ದು ಸಾಲದು ಅಂತ ನನ್ನನ್ನೂ ಡ್ರಗ್ಸ್ ಸೇವಿಸುವಂತೆ ಪೀಡಿಸುತ್ತಿದ್ದ. ಹಲವು ಬಾರಿ ಮಾದಕ ಟ್ಯಾಬ್ಲೇಟ್ ತಿನ್ನಿಸಿ ವಿಕೃತಿ ಮೆರೆದಿದ್ದ. ಬಲವಂತವಾಗಿ ಡ್ರಿಂಕ್ಸ್ ಮಾಡಿಸಿ ಚಿತ್ರಹಿಂಸೆ ಕೊಡ್ತಿದ್ದ. ಮನೆಯಲ್ಲಿ ಕೊಕೇನ್ ಜತೆಗೆ ಗಾಂಜಾವನ್ನೂ ಸ್ಟಾಕ್ ಮಾಡಿಕೊಂಡಿರುತ್ತಿದ್ದ' ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಆರೋಪಿ ಲೋಹಿತ್, ವಿದ್ಯಾವಂತ, ಐಟಿ ಕಂಪನಿ ಉದ್ಯೋಗಿ. ಅವರ ತಂದೆ ಇಸ್ರೋ ಉದ್ಯೋಗಿ.