ಸಿಸಿಬಿ ನೋಟಿಸ್​ ಬರುತ್ತಿದ್ದಂತೆ ರಾಜ್ಯದ ಮೂವರು ಪ್ರಭಾವಿ ನಾಯಕರಿಗೆ ಅನುಶ್ರೀ ಕರೆ ಮಾಡಿದ್ದರು!

Anushree-Anchor
Published on

ಮಂಗಳೂರು: ಡ್ರಗ್ಸ್​ ಕೇಸ್​ ಸಂಬಂಧ ಮಂಗಳೂರಿನ ಸಿಸಿಬಿ ಪೊಲೀಸರು ನೋಟಿಸ್​ ಜಾರಿ ಮಾಡುತ್ತಿದ್ದಂತೆ ನಿರೂಪಕಿ ಅನುಶ್ರೀ, ರಾಜ್ಯದ ಮೂವರು ಪ್ರಭಾವಿ ನಾಯಕರಿಗೆ ಫೋನ್​ ಮಾಡಿದ್ದರು ಎಂಬ ಸತ್ಯ ಬಹಿರಂಗವಾಗಿದೆ. ಆ ಮೂಲಕ ಮಾತಿನ ಮಲ್ಲಿಗೆ ಪೊಲೀಸರ ಮೇಲೆ ಒತ್ತಡ ಹೇರುವಂತಹ ದೊಡ್ಡವರ ಲಿಂಕ್ ಇತ್ತೇ? ಎಂಬ ಪ್ರಶ್ನೆ ಮೂಡಿದೆ.

ಡ್ರಗ್ಸ್ ಸಾಗಾಟ ಆರೋಪದಲ್ಲಿ ಬಂಧಿತ ಆರೋಪಿಗಳಾದ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ(30) ಹಾಗೂ ಅಕೀಲ್ ನೌಶೀಲ್(28) ಜತೆ ನಂಟು ಇರುವ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್ ನಟಿ, ನಿರೂಪಕಿ ಅನುಶ್ರೀಗೆ ಮಂಗಳೂರು ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೆ.24ರಂದು ನೋಟಿಸ್​ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅನುಶ್ರೀ ಸೆ.26ರಂದು ಸಿಸಿಬಿ ವಿಚಾರಣೆಗೆ ಹಾಜರ್​ ಆಗಿದ್ದರು. ವಿಚಾರಣೆ ವೇಳೆ ಅವರ ಸಿಮ್ ಅನ್ನು ಸಿಸಿಬಿ ವಶಪಡಿಸಿಕೊಂಡಿತ್ತು.

ಅನುಶ್ರೀಗೆ ಸಿಸಿಬಿ ನೋಟಿಸ್ ಬಂದ ದಿನ ಮತ್ತು ಮರುದಿನ ರಾಜ್ಯದ ಮೂವರು ಪ್ರಭಾವಿ ವ್ಯಕ್ತಿಗಳಿಗೆ ಮೊಬೈಲ್​ ಕರೆ ಮಾಡಿ ತುಂಬಾ ಸಮಯ ಮಾತನಾಡಿದ್ದಾರೆ. ಆ ಮೂವರು ಅಂತಿಂಥಾ ಪ್ರಭಾವಿಗಳಲ್ಲ! ಅವರೇ ಮಾಜಿ‌ ಮುಖ್ಯಮಂತ್ರಿ, ಮಾಜಿ ಸಿಎಂ ಪುತ್ರ, ಕರಾವಳಿ ಮೂಲದ ರಾಜ್ಯ ನಾಯಕ. ಅನುಶ್ರೀ ಕರೆ ಮಾಡಿದ ಡಿಟೇಲ್ಸ್​ ನೋಡಿ ಸಿಸಿಬಿ ಪೊಲೀಸರೇ ಶಾಕ್ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net