ಮಾದಕವಸ್ತು ಚಟ ಮಾರಕ ಕಾಯಿಲೆ: ವಿವೇಕ್ ವಿನ್ಸೆಂಟ್ ಪಾಯಸ್ ಅನಿಸಿಕೆ

Bel_Drugs-Addition
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ವಿಶ್ವಸಂಸ್ಥೆ ಗುರುತಿಸಿದ ಆರು ಮಾರಕ ಕಾಯಿಲೆಗಳಲ್ಲಿ ಮಾದಕವಸ್ತು ಚಟ ಕೂಡ ಒಂದು. ಯಾವುದೇ ಚಟ ಮಿತಿ ಮೀರಿದಾಗ ಅದಕ್ಕೆ ಮನಸ್ಸು ಹೊಂದಿಕೊಳ್ಳುತ್ತದೆ. ವಿದ್ಯಾರ್ಥಿಗಳು ಇಂತಹ ಚಟಗಳಿಗೆ ಬಲಿಯಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು. ಕಲಿಕೆಯ ಜತೆಗೆ ಜೀವನದ ಪಾಠದಲ್ಲೂ ಉತ್ತೀರ್ಣರಾಗಬೇಕು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಗುರುವಾಯನಕೆರೆ, ಅಖಿಲ ಕರ್ನಾಟಕ ಜನ ಜಾಗೃತಿ ಟ್ರಸ್ಟ್ ಧರ್ಮಸ್ಥಳ, ಎಕ್ಸೆಲ್ ಪದವಿ ಪೂರ್ವ ಕಾಲೇಜು, ವಿದ್ಯಾಸಾಗರ ಕ್ಯಾಂಪಸ್ ಗುರುವಾಯನಕೆರೆ, ಜನ ಜಾಗೃತಿ ವೇದಿಕೆ ಬೆಳ್ತಂಗಡಿ ತಾಲೂಕು ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ತಾಲೂಕುಮಟ್ಟದ ಸ್ವಾಸ್ತ್ಯ ಸಂಕಲ್ಪ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ಎಕ್ಸೆಲ್ ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯನನ್ನು ಹಾಳು ಮಾಡುವ ವ್ಯಸನಕ್ಕೆ ಬಲಿಯಾಗಬಾರದು. ದುಶ್ಚಟಗಳು ಆರಂಭ ಆಗುವುದು ಸಹವಾಸ ದೋಷದಿಂದ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಇಂಥಹ ಕಾರ್ಯಕ್ರಮಗಳಿಂದ ಯಾವುದೇ ವೈಯಕ್ತಿಕ ಲಾಭಗಳಿಲ್ಲ ಆದರೆ ಅವರಿಗೆ ಸಮಾಜದ ಕಳಕಳಿ ಇದೆ ಎಂದರು.

ಕಾಲೇಜಿನ ಆಡಳಿತ ಅಧಿಕಾರಿ ಕೀರ್ತಿನಿಧಿ, ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ಶಾರದಾ ರೈ, ತಾಲೂಕು ಜನ ಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಕಿಶೋರ್ ಹೆಗ್ಡೆ, ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ, ವಲಯ ಮೇಲ್ವಿಚಾರಕಿ ಯಶೋದಾ, ಸೇವಾ ಪ್ರತಿನಿಧಿ ಫೆಲ್ಸಿಟ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net