

ಸೊನ್ನ ಮಠದಲ್ಲಿ ಕೆಕೆಆರ್ ಡಿಬಿ ಅಜಯಸಿಂಗ್‌ರಿಗೆ ಬೆಳ್ಳಿ ಕಿರೀಟ ತೊಡಿಸಿ ಗೌರವಿಸಿದ ಸ್ವಾಮೀಜಿಗಳು / ಲಿಂಗೈಕ್ಯ ಶತಾಯುಷಿ ಶಿವಾನಂದ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವ |
ವಿಜಯವಾಣಿ ಸುದ್ದಿಜಾಲ ಕಲಬುರಗಿ
ರಾಜ್ಯದಲ್ಲಿ ತಲೆದೋರಿದ ಬರಗಾಲ ಪರಿಸ್ಥಿತಿ ನಿಭಾಯಿಸಲು ತಕ್ಷಣಕ್ಕೆ ತಾತ್ಕಾಲಿಕವಾಗಿ ಎನ್‌ಡಿಆರ್‌ಎಫ್ ನಿಯಮದಂತೆ ಅಗತ್ಯ ನೆರವು ನೀಡುವಂತೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ಧರಾಮಯ್ಯ ನೇತೃತ್ವದ ರಾಜ್ಯದ ನಿಯೋಗ ಮನವಿ ಮಾಡಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ.ಅಜಯ ಧರ್ಮಸಿಂಗ್ ಹೇಳಿದರು.
ತ್ರಿವಿಧ ದಾಸೋಹ ಕೇಂದ್ರವಾಗಿರುವ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದ ಸಿದ್ಧಲಿಂಗೇಶ್ವರ ದಾಸೋಹ ವಿರಕ್ತಮಠದ ಲಿಂಗೈಕ್ಯ ಪೂಜ್ಯ ಶಿವಾನಂದ ಶಿವಯೋಗಿಗಳ ೪೪ನೇ ಪುಣ್ಮ ಸ್ಮರಣೋತ್ಸವ ಅಂಗವಾಗಿ ಶ್ರೀಮಠದಲ್ಲಿ ಜರುಗಿದ ಶಿವಾನುಭವದಲ್ಲಿ ಸನ್ಮಾನ ಹಾಗೂ ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಸೇರಿದಂತೆ ಕೇಂದ್ರ ಸಚಿವರು ಹಾಗೂ ಕೆಲ ಸಂಸದರು ಸೇರಿಕೊಂಡು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಲಾಗಿದೆ ಎಂದರು.
ಸರ್ಕಾರ ಈಗಾಗಲೇ ೧೬೧ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. ಬೆಳೆ ಹಾನಿಯಾಗಿರುವ ರೈತರಿಗೆ ಪರಿಹಾರ ನೀಡಲು ಹಾಗೂ ಕುಡಿವ ನೀರು ಇನ್ನಿತರ ತುರ್ತು ಬರ ಪರಿಹಾರ ಕೆಲಸಗಳಿಗೆ ಕೇಂದ್ರ ನೆರವು ನೀಡಿದರೆ, ಅನುವು ಆಗಲಿದೆ. ಅಲ್ಲದೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿAಗ್ ಅವರಿಗೆ ಯುಕೆಪಿ ಕೆಲಸಗಳಿಗೆ ಸಹಾಯ ಕೋರಲಾಗಿದೆ ಎಂದು ಡಾ.ಅಜಯಸಿಂಗ್ ತಿಳಿಸಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿ, ಕಲ್ಯಾಣ ಕರ್ನಾಟಕದ ಶ್ರೇಷ್ಠಗಳಲ್ಲಿ ಸೊನ್ನ ಮಠವು ಒಂದಾಗಿದೆ. ಇದು ಉತ್ತರ ಕರ್ನಾಟಕದ ಸಿದ್ಧಗಂಗೆಯAತೆ ಎಂದು ಬಣ್ಣಿಸಿದರು.
ಶ್ರೀಶೈಲಸಾರಂಗಮಠ-ಸುಲಫಲ ಮಠದ ಜಗದ್ಗುರು ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳ ಸಾನಿಧ್ಯ ವಹಿಸಿದ್ದರು.ಇಜೇರಿ-ಮಸಬಿನಾಳ ವಿರಕ್ತಮಠದ ಪೂಜ್ಯ ಸಿದ್ದರಾಮ ಮಹಾಸ್ವಾಮಿಗಳ ಅಧ್ಯಕ್ಷತೆ ವಹಿಸಿದ್ದರು. ನೆಲೋಗಿಯ ಪೂಜ್ಯ ಸಿದ್ದಲಿಂಗ ಮಹಾಸ್ವಾಮೀಜಿ, ಜೇರಟಗಿಯ ಮಹಾಂತ ಸ್ವಾಮೀಜಿ, ಫಿರೋಜಾಬಾದಿನ ಗುರುಬಸವ ಮಹಾಸ್ವಾಮೀಜಿ ಹಾಗೂ ಯಡ್ರಾಮಿಯ ಸಿದ್ಧಲಿಂಗ ಮಹಾಸ್ವಾಮಿಗಳ ನೇತೃತ್ವ ವಹಿಸಿದ್ದರು. ಸೊನ್ನ ಮಠದ ಪೂಜ್ಯರಾದ ಶ್ರೀಮಠದ ಪೂಜ್ಯ ಡಾ.ಶಿವಾನಂದ ಮಹಾಸ್ವಾಮಿಗಳು ಸಮ್ಮುಖ ವಹಿಸಿಕೊಂಡು ಮಾತನಾಡಿದರು.
ಅಜಯಸಿಂಗ್ ಅವರಿಗೆ ಜಗಮೆಚ್ಚಿದ ಮಗ ಎಂಬ ಪ್ರಶಸ್ತಿ ನೀಡಿ ಮಠದಿಂದ ಬೆಳ್ಳಿ ಕಿರೀಟ ತೊಡಿಸಿ ವಿಶೇಷ ಸನ್ಮಾನ ಮಾಡಿ, ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಹುದ್ದೆಗೆ ಏರಲಿ ಎಂದು ಆರ್ಶೀವದಿಸಿದರು. ಯುವ ಮುಖಂಡ ವಿಜಯಕುಮಾರ ಕೇದಾರಲಿಂಗಯ್ಯ ಹಿರೇಮಠ ಅವರಿಗೆ ಶ್ರೀಮಠದಿಂದ ಯುವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ರಾಜಶೇಖರ ಸಿರಿ, ರೇಣುಕಾ ಚಟ್ಟರಕಿ, ಗುರು ಎಎಸ್‌ಐ ಇತರÀರನ್ನು ಸನ್ಮಾನಿಸಲಾಯಿತು. ಬಸವರಾಜ ಮಾಸ್ತರ ಶಹಾಪುರ ಸ್ಮರಣಾರ್ಥ ಅವರ ಪುತ್ರ ರೋಮೇಶ ಮುಧೋಳ ಅವರಿಂದ ನಿರ್ಗತಿಕ ಮಕ್ಕಳಿಗೆ ಸಮವಸ್ತç ವಿತರಿಸಲಾಯಿತು.
ಪ್ರವಚನಕಾರರಾದ ಶಿವಲಿಂಗಯ್ಯ ಶಾಸ್ತಿçÃ, ಅರ್ಚಕರಾದ ಸಿದ್ದಯ್ಯ ಶಾಸ್ತಿçÃಗಳು, ಕಲಾವಿದರಾದ ಶಿವರುದ್ರಯ್ಯ ಗೌಡಗಾಂವ,ಶಿವಾನAದ ನರಿಬೋಳ, ಪ್ರಮುಖರಾದ ಬಸವರಾಜ ಬಿರಾದಾರ ಸೊನ್ನ,ವಿಜಯಕುಮಾರ ಬಿರಾದಾರ,ಶಿವಾನಂದ ಮುಧೋಳ, ಶಿವಾನಂದ ಸಾಹು ಮಾಕಾ, ಸಂಗನಬಸಪ್ಪ ಬಿರಾದಾರ, ಶರಣಬಸಪ್ಪ ಮಣ್ಣೂರ, ಬಾಪುಗೌಡ ಪೊಲೀಸ್ ಪಾಟೀಲ್,ನಬಿಸಾಬ ಭಾಗವಾನ್, ನಿಂಗಣ್ಣಗೌಡ ಜವಳಗಿ, ಶ್ರೀಕಾಂತ ಸೋನಾರ, ವಿರೇಶ ಮಾಕಾ, ರಾಚಪ್ಪಗೌಡ ಮಾಲಿಪಾಟೀಲ್, ಚನ್ನವೀರಪ್ಪಗೌಡ ಬಂಡೆಪ್ಪಗೌಡರ, ಅಶೋಕ ಕೋಳಕೂರ, ನಿಂಗನಗೌಡ ಮಾಲಿಪಾಟೀಲ್,ಭೀಮಯ್ಯ ಕಲಾಲ್, ಬಾಪುಗೌಡ ಪಾಟೀಲ್, ಶಿವಲಿಂಗಪ್ಪ ಮುಧೋಳ, ಸಕ್ರೆಪ್ಪಗೌಡ, ರೇವಣಸಿದ್ದಪ್ಪ ಅಕ್ಕಿ ಮೊದಲಾದವರಿದ್ದರು. ಸಾಹಿತಿ ಹಾಗೂ ಉಪನ್ಯಾಸಕ ಸದಾನಂದ ಪಾಟೀಲ್ ನಿರೂಪಿಸಿ, ವಂದಿಸಿದರು.