ಉತ್ತರ ಕರ್ನಾಟಕ ಭಾಗಕ್ಕೆ ಸಂಪರ್ಕ ಕಲ್ಪಿಸುವ ಬಸ್‌ಗೆ ಚಾಲನೆ

19skpp3 mla bus
Published on

ಸಕಲೇಶಪುರ: ಮಲೆನಾಡಿನಿಂದ ಉತ್ತರ ಕರ್ನಾಟಕ ಭಾಗಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹೊಸ ಬಸ್ಸನ್ನು ಸಕಲೇಶಪುರದಿಂದ ವಿಜಯಪುರಕ್ಕೆ ಬಿಡಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.


ಸಕಲೇಶಪುರದಿಂದ ವಿಜಯಪುರಕ್ಕೆ ಆರಂಭವಾಗಿರುವ ನೂತನ ಬಸ್‌ಗೆ ಶಾಸಕರು ಹಸಿರು ನಿಶಾನೆ ತೋರಿಸುವ ಮುಖಾಂತರ ಚಾಲನೆ ನೀಡಿ ಮಾತನಾಡಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದ ಜನರ ಅನುಕೂಲಕ್ಕಾಗಿ ಹೊಸ ಬಸ್ಸನ್ನು ಸಕಲೇಶಪುರ ಡಿಪೋದಿಂದ ವಿಜಯಪುರಕ್ಕೆ ಬಿಡಲಾಗುತ್ತಿದೆ. ಈ ಬಸ್‌ನಿಂದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಬಳ್ಳಾರಿ, ವಿಜಯಪುರ ಜಿಲ್ಲೆಗಳ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಪ್ರತಿ ದಿನ ಪಟ್ಟಣದಿಂದ ಮಧ್ಯಾಹ್ನ 12.30ರ ವೇಳೆಗೆ ಬಿಡುವ ಈ ಬಸ್ ಮರುದಿನ ಮುಂಜಾನೆ 6 ಗಂಟೆಗೆ ವಿಜಯಪುರ ತಲುಪುತ್ತದೆ. ನಂತರ ಸಂಜೆ 7 ಗಂಟೆಗೆ ವಿಜಯಪುರ ಬಸ್ ಮರುದಿನ ಮಧ್ಯಾಹ್ನದ ವೇಳೆಗೆ ಸಕಲೇಶಪುರ ತಲುಪುತ್ತದೆ. ಸಾರ್ವಜನಿಕರು ಈ ಬಸ್‌ನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.


ಈ ಬಸ್ ನಿಲ್ದಾಣದಲ್ಲಿ ಕೆಲವೊಂದು ಸಮಸ್ಯೆಗಳಿದ್ದು ಇದನ್ನು ಬಗೆಹರಿಸಲು ಆದ್ಯತೆ ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net