ಸಂಸ್ಕೃತಿ ಸಂಸ್ಕಾರ ಪುನರುತ್ಥಾನಕ್ಕೆ ಪ್ರೇರಕ ಶಕ್ತಿ : ದಿನಕರ ಶೆಣೈ ಅನಿಸಿಕೆ ಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ

puraskara
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು 18ಪೇಟೆ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನ ಚೇಂಪಿ ಆಡಳಿತ ಮೊಕ್ತೇಸರ ದಿನಕರ ಶೆಣೈ ಉದ್ಘಾಟಿಸಿದರು
Published on

ಕೊಕ್ಕರ್ಣೆ: ಸಂಸ್ಕೃತಿ ಸಂಸ್ಕಾರ ಪುನರುತ್ಥಾನಗೊಳ್ಳಲು ಧಾರ್ಮಿಕ ಕಾರ್ಯಕ್ರಮ ಸಹಕಾರಿ ಎಂದು 18 ಪೇಟೆ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನ ಚೇಂಪಿ ಆಡಳಿತ ಮೊಕ್ತೇಸರ ದಿನಕರ ಶೆಣೈ ಹೇಳಿದರು.

ಸಾಹೇಬರಕಟ್ಟೆಯಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘ ಸಾಹೇಬರಕಟ್ಟೆ ಶಿರಿಯಾರ ಹಾಗೂ ಗೌಡಸಾರಸ್ವತ ಮಹಿಳಾ ಸೇವಾ ಸಂಘ ಸಾಹೇಬರಕಟ್ಟೆ ಆಶ್ರಯದಲ್ಲಿ 2024ನೇ ಸಾಲಿನ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿರಾಲಿ ಶ್ರೀ ಮಹಾಗಣಪತಿ ದೇವಸ್ಥಾನ ಆಡಳಿತ ಮೊಕ್ತೇಸರ ಡಿ.ಗೋಪಿನಾಥ್ ಕಾಮತ್, ಕೆನರಾ ಬ್ಯಾಂಕ್ ನಿವೃತ್ತ ಡಿಜಿಎಂ ಅಶೋಕ್ ಕುಮಾರ್ ಕಿಣಿ, ಉದ್ಯಮಿ ಕೋಟ ರಾಧಾಕೃಷ್ಣ ನಾಯಕ್, ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್ ಕಲ್ಮರ್ಗಿ ಶಿರಿಯಾರ ನಿಕಟಪೂರ್ವ ಅಧ್ಯಕ್ಷ ನಾಗೇಶ ನಾಯಕ್, ಜಿಎಸ್‌ಬಿ ಸೇವಾ ಸಂಘ ಸಾಹೇಬರಕಟ್ಟೆ ಶಿರಿಯಾರ ಅಧ್ಯಕ್ಷ ನಾರಾಯಣ ಶೆಣೈ ಗಾವಳಿ, ಮಹಿಳಾ ಸಂಘದ ಅಧ್ಯಕ್ಷೆ ಕಾವ್ಯ ವಿ.ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ಸಂಘ ಕಾರ್ಯದರ್ಶಿ ಮಾಧವ ಹೆಗ್ಡೆ ಸ್ವಾಗತಿಸಿದರು. ಮಧುವನ ಗಣೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಶಾನುಭಾಗ್ ಎತ್ತಿನಟ್ಟಿ ವಂದಿಸಿದರು.

ಸನ್ಮಾನ, ಗಿಡ ವಿತರಣೆ

ಸಂಘದ ವ್ಯಾಪ್ತಿಯಲ್ಲಿ ಬರುವ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನುಸನ್ಮಾನಿಸಲಾಯಿತು. ಕಾಶೀಮಠ ಮಠಾಧೀಶ ಶ್ರೀ ಸುಧೀಂದ್ರ ತೀರ್ಥ ಶ್ರೀಪಾದರ ಜನ್ಮ ಶತಾಬ್ದಿ ಅಂಗವಾಗಿ ಸಮಾಜ ಬಾಂಧವರಿಗೆ ಗಿಡಗಳನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net