ಕನ್ನಡಪರ ಹೋರಾಟದಲ್ಲಿ ಚಾಲಕರು ಮುಂಚೂಣಿ

21Kush03
Published on

ಕುಶಾಲನಗರ: ಚಾಲಕರು ಸದಾ ಕನ್ನಡಪರ ಹೋರಾಟಗಳಲ್ಲಿ ಪಾಲ್ಗೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಚಾಲಕರ ಒಕ್ಕೂಟದ ಅಧ್ಯಕ್ಷ ಜಿ.ನಾರಾಯಣಸ್ವಾಮಿ ಹೇಳಿದರು.


ಕುಶಾಲನಗರ ತಾಲೂಕು ಚಾಲಕರ ಒಕ್ಕೂಟದಿಂದ ಕಾರು ನಿಲ್ದಾಣದಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತರ ಭಾಷೆಗಳ ಹಾವಳಿ ನಡುವೆ ಕನ್ನಡ ಕಣ್ಮರೆಯಾಗಬಾರದು. ಇತರ ಭಾಷೆಯ ಜ್ಞಾನವಿದ್ದರೂ ಕನ್ನಡ ಕಲಿಸಿ ನಂತರ ಅವರ ಭಾಷೆ ಬಳಕೆಗೆ ಎಲ್ಲರೂ ಆದ್ಯತೆ ನೀಡುವಂತಾಗಬೇಕು. ಕನ್ನಡಪರ ಹೋರಾಟದಲ್ಲಿ ಚಾಲಕರು ಸದಾ ಮುಂಚೂಣಿಯಲ್ಲಿರುತ್ತಾರೆ ಎಂದರು.


ಜಿ.ನಾರಾಯಣಸ್ವಾಮಿ ಅವರನ್ನು ಮೆರವಣಿಗೆ ಮೂಲಕ ಮೂಲಕ ಕರೆತಂದರು. ಮಾಜಿ ಸೈನಿಕ ಅಬ್ದುಲ್ ರಜಾಕ್, ಎಂ.ಕೆ.ತಮ್ಮಯ್ಯ, ಅಲ್ಬರ್ಟ್ ಗೋಶಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಜ್ಯ ಉಪಾಧ್ಯಕ್ಷ ಗುರುಮೂರ್ತಿ, ಎಂ.ಡಿ.ಮಸ್ತಾನ್, ರಾಜ್ಯ ಸಂಚಾಲಕ ಕೃಷ್ಣರಾಜು ಅರಸು, ಅರವಿಂದ ದಕ್ಷ, ಪ್ರಧಾನ ಕಾರ್ಯದರ್ಶಿ ಯೋಗೇಶ್ ಗೌಡ, ಬೆಂಗಳೂರು ನಗರಾಧ್ಯಕ್ಷ ನಾಗರಾಜ್ ಗೌಡ, ಉತ್ತರಹಳ್ಳಿ ಅಧ್ಯಕ್ಷ ರುದ್ರೇಶ್, ಸಿದ್ದರಾಜು, ಕೊಡಗು ಜಿಲ್ಲಾ ಘಟಕ ಅಧ್ಯಕ್ಷ ಸಯ್ಯದ್ ಮುಜೀಬ್, ಉಪಾಧ್ಯಕ್ಷ ಕೆ.ಚಂದ್ರು, ಗೌರವ ಸಲಹೆಗಾರರಾದ ನಾಸಿರ್, ಫಯಾಜ್, ಕೆ.ಆರ್.ನಂಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಯ್ಯದ್ ರಿಯಾಜ್, ಕುಶಾಲನಗರ ತಾಲೂಕು ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ಮನುಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಎ.ಸನಾವುಲ್ಲಾ ಖಾನ್ ಇದ್ದರು.


ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಾಸಕ ಡಾ.ಮಂತರ್‌ಗೌಡ ಭೇಟಿ ನೀಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net