ಆಟೋ ರಿಕ್ಷಾ ನಿಲ್ದಾಣ ತೆರವಿಗೆ ಆಕ್ರೋಶ

manavi
ರಿಕ್ಷಾ ಚಾಲಕ ಮಾಲೀಕರ ಸಂಘದ ವತಿಯಿಂದ ಆಕ್ರೋಶ ವ್ಯಕ್ತಪಡಿಸಿ ಸ್ಥಳೀಯ ಪಂಚಾಯಿತಿಗೆ ಮನವಿ ಸಲ್ಲಿಸಿದರು
Published on

ಕಾರ್ಕಳ: ಬೆಳ್ಮಣ್ ಬಸ್ ನಿಲ್ದಾಣ ಬಳಿಯಲ್ಲಿರುವ ಖಾಲಿ ಜಾಗದಲ್ಲಿ ಸ್ಥಳೀಯ ಪಂಚಾಯಿತಿ ನಿರ್ಣಯದಂತೆ ತಾತ್ಕಾಲಿಕ ತಂಗುದಾಣ ಹಾಗೂ ಆಟೋ ರಿಕ್ಷಾ ಪಾರ್ಕಿಂಗ್‌ಗೆ ಮುಂದಾಗಿದ್ದು, ಇದನ್ನು ವಿರೋಧಿಸಿ ಆಟೋ ಚಾಲಕರು ಹಾಗೂ ನಾಗರಿಕರು ಕೂಡಲೇ ತೆರವು ಮಾಡುವಂತೆ ಆಗ್ರಹಿಸಿ ಗುರುವಾರ ಗ್ರಾಪಂಗೆ ಮನವಿ ಸಲ್ಲಿಸಿದರು.

ರಾಜ್ಯ ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ಹಳೆಯ ಮಾರುಕಟ್ಟೆ ಕೆಡವಿ ಹಾಕಲಾಗಿದ್ದು ಲೋಕೋಪಯೋಗಿ ಇಲಾಖೆ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಮತ್ತೆ ಪಂಚಾಯಿತಿ ತಾತ್ಕಾಲಿಕ ತಗಡು ಶೀಟು ಅಳವಡಿಸಿ ತಂಗುದಾಣ ಹಾಗೂ ಆಟೋ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದ್ದು, ಆಟೋ ಚಾಲಕರು ಯಾವುದೇ ಕಾರಣಕ್ಕೂ ನಾವು ಈ ಹಿಂದೆ ಇದ್ದ ಜಾಗ ಬಿಟ್ಟು ಕೊಡುವುದಿಲ್ಲ. ಹಲವು ವರ್ಷಗಳಿಂದ ಇದ್ದ ಆಟೋ ನಿಲ್ದಾಣ ಜಾಗದಲ್ಲೆ ಆಟೋ ನಿಲ್ದಾಣಕ್ಕೆ ಅವಕಾಶ ಮಾಡಿ ಕೊಡಿ. ಯಾರದ್ದೋ ಖಾಸಗಿ ವ್ಯಕ್ತಿಯ ಲಾಭಕ್ಕಾಗಿ ನಮಗೆ ಹೊಸ ಜಾಗದಲ್ಲಿ ನಿಲ್ದಾಣ ಮಾಡುವ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸ್ಥಳೀಯ ಬೆಳ್ಮಣ್ ಗ್ರಾಪಂಗೆ ಮನವಿ ಸಲ್ಲಿಸಿದರು. ಆ ಬಳಿಕ ಕಾಮಗಾರಿ ಕೂಡಲೇ ಸ್ಥಗಿತಗೊಳಿಸಲಾಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net