ಸಹಾಯ ಮಾಡಲು ಹೋಗಿ ಪ್ರಾಣ ಬಿಟ್ಟ ಚಾಲಕ

Accident
Published on

ಚನ್ನಪಟ್ಟಣ

ಪಂಚರ್ ಆಗಿದ್ದ ಲಾರಿಗೆ ಸಹಾಯ ಮಾಡಲು ಹೋದ ಮತ್ತೊಂದು ಲಾರಿಯ ಚಾಲಕನೊರ್ವ ರಸ್ತೆ ಅಪಘಾತದಲ್ಲಿ ಭೀಕರವಾಗಿ ಮೃತಪಟ್ಟ ಘಟನೆ ತಾಲೂಕಿನ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹೈವೇಯ ಲಂಬಾಣಿ ತಾಂಡ್ಯದ ಬಳಿ ಗುರುವಾರ ರಾತ್ರಿ ನಡೆದಿದೆ.

ರಾಮನಗರದ ಸಂಗಬಸವನದೊಡ್ಡಿ ಗ್ರಾಮದ ನಾಗೇಶ್ ಮೃತ ಚಾಲಕ. ಬೆಂಗಳೂರಿನಿಂದ ಮೈಸೂರಿಗೆ ಗೋಧಿ ಸಾಗಿಸುತ್ತಿದ್ದ ಲಾರಿಯೊಂದು ಲಂಬಾಣಿ ತಾಂಡ್ಯದ ಬಳಿ ಪಂಚರ್ ಆಗಿತ್ತು. ಇದೇ ರಸ್ತೆಯಲ್ಲಿ ಬಂದ ಅದೇ ಕಂಪನಿಯ ಲಾರಿ ಚಾಲಕ ಪಂಚರ್ ಆಗಿದ್ದ ಲಾರಿ ಚಾಲಕನಿಗೆ ಸಹಾಯ ಮಾಡಿದ್ದು, ಲಾರಿಯ ಚಕ್ರ ಬದಲಾಯಿಸಿ ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ, ಹಿಂಬದಿಯಿಂದ ಬಂದ ಕಂಟೇನರ್ ವೊಂದು ಡಿಕ್ಕಿ ಹೊಡೆದಿದೆ.

ಈ  ಘಟನೆಯಲ್ಲಿ ಸಹಾಯಕ್ಕೆಂದು ಬಂದಿದ್ದ ಚಾಲಕ ನಾಗೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಮತ್ತೊರ್ವ ವ್ಯಕ್ತಿ ಕೂಡ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net