

ಮುಂಡಗೋಡ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಪಟ್ಟಣದ ಶಿರಸಿ ರಸ್ತೆಯಲ್ಲಿ ಸೋಮವಾರ ನಸುಕಿನ ಜಾವ ಜರುಗಿದೆ.
ಶಿರಸಿಯಿಂದ ಹುಬ್ಬಳ್ಳಿಯತ್ತ ಸಾಗುತ್ತಿದ್ದ ಕಾರು ನಸುಕಿನ ಜಾವ ದಟ್ಟವಾಗಿ ಮಂಜು ಕವಿದ ಪರಿಣಾಮ ಸರಿಯಾಗಿ ರಸ್ತೆ ಕಾಣದೆ ಪಟ್ಟಣದ ಶಿರಸಿ ರಸ್ತೆಯಲ್ಲಿ ಶಿವರಾಜ ಹೊಂಡಾ ಬೈಕ್ ಶೋ ರೂಂ ಬಳಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಕಾರಿನ ಮುಂಭಾಗ ಜಖಂಗೊಂಡಿದೆ ಹಾಗೂ ವಿದ್ಯುತ್ ಕಂಬ ಮುರಿದಿದೆ.