ಕನಸಿನ ಮನೆ ಯೋಜನೆಗೆ ಚಾಲನೆ

Bdk_Rotary
Published on

ಬದಿಯಡ್ಕ: ರೋಟರಿ ಕನಸಿನ ಮನೆ ಯೋಜನೆ ಅಂಗವಾಗಿ ನಾರಂಪಾಡಿ ಪಿಲಿಕೂಡ್ಲು ಉಷಾಕುಮಾರಿ ಎಂಬುವರಿಗೆ ಮಂಜೂರಾದ ಮನೆ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸವನ್ನು ಘಟಕ ಅಧ್ಯಕ್ಷ ಕೇಶವ ಪಾಟಾಳಿ ಬದಿಯಡ್ಕ ಇತ್ತೀಚೆಗೆ ನೆರವೇರಿಸಿದರು. ಬಳಿಕ ಮಾತನಾಡಿ, ರೋಟರಿ ಸಂಘಟನೆ ಅನೇಕ ಜನಪರ ಚಟುವಟಿಕೆಗಳನ್ನು ನಡೆಸುತ್ತಿದ್ದು, ಇದೀಗ ಘಟಕದ ಮೂಲಕ ಎರಡನೇ ಮನೆ ಮಂಜೂರಾಗಿದೆ. ಸೂರಿಲ್ಲದೆ ಜನರು ಕಷ್ಟಪಡಬಾರದು ಎಂಬ ಸದುದ್ದೇಶದಿಂದ ಕನಸಿನ ಮನೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಚೆಂಗಳ ಗ್ರಾಪಂ ಸದಸ್ಯ ಲತೀಫ್ ನಾರಂಪಾಡಿ, ರೋಟರಿ ಕಾರ್ಯದರ್ಶಿ ರಮೇಶ ಆಳ್ವ ಕಡಾರು, ಖಜಾಂಚಿ ಗೋಪಾಲಕೃಷ್ಣ ಕಾಮತ್, ಸದಸ್ಯ ಕೃಷ್ಣಪ್ರತೀಕ ಬೆಳ್ಳಿಗೆ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net