

ಬೆಳ್ತಂಗಡಿ: ಪರೀಕ ಆತ್ರಾಡಿ ಮಸೀದಿಯಿಂದ ಶ್ರೀನಿವಾಸ ದೇವಸ್ಥಾನದವರೆಗೆ ಮಾರ್ಗದ ಅಗಲೀಕರಣದೊಂದಿಗೆ ಡಾಂಬರೀಕರಣಕ್ಕೆ ಬುಧವಾರ ಚಾಲನೆ ನೀಡಲಾಯಿತು.
ವಿನಯ ಕುಮಾರ್ ಸೊರಕೆ ಅವರ ಶಿಫಾರಸಿನೊಂದಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕೀಹೊಳಿ ಅನುದಾನದಲ್ಲಿ, ಗುತ್ತಿಗೆದಾರ ಮುನಿಯಾಲು ಉದಯ ಕುಮಾರ್ ಶೆಟ್ಟಿ ಪ್ರಯತ್ನ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಇಸ್ಮಾಯಿಲ್ ಮುತುವರ್ಜಿಯಲ್ಲಿ ಕೆಲಸವು ಕಾರ್ಯಗತಗೊಂಡಿತು.
ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯ, ಇಸ್ಮಾಯಿಲ್, ಸೋಮನಾಥ್ ಶೆಟ್ಟಿ, ಡಾ.ಗೋಪಾಲ್ ಪೂಜಾರಿ, ಡಾ.ಶೋಭಿತ್ ಶೆಟ್ಟಿ, ಪ್ರವೀಣ್ ಕುಮಾರ್, ಹಾಜಿ ಅಬೂಬಕ್ಕರ್, ಸೌಖ್ಯವನ ಆಡಳಿತ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು.