ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
Published on

ನಂಜನಗೂಡು: ನಗರದ ಕಾರ್ಮೆಲ್ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣದಲ್ಲಿ, ಸರ್ಕಾರಿ ಪದವಿಪೂರ್ವ ಕಾಲೇಜು ಹೆಮ್ಮರಗಾಲ, ಜೆಎಸ್‌ಎಸ್ ಕಾಲೇಜು ಹುಲ್ಲಹಳ್ಳಿ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ 2024-25 ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ್ ಚಾಲನೆ ನೀಡಿದರು.

ನಂತರ ಮಾತನಾಡಿ, ಕ್ರೀಡೆ ದೈಹಿಕವಾಗಿ ಮಾನಸಿಕವಾಗಿ ಸದೃಢರಾಗಲು ಸಹಕಾರಿಯಾಗಿದೆ. ಪರಿಪೂರ್ಣ ಬದುಕು ಸಾಗಿಸಲು ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ವಿದ್ಯಾಭ್ಯಾಸದ ಜತೆಗೆ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲ ಡಾ. ಜಾರ್ಜ್ ಫ್ರಾನ್ಸಿಸ್, ದಿನೇಶ್, ಚಂದ್ರಶೇಖರ್ ಬಾಬು, ವೆಂಕಟೇಶ್, ನಾಗರಾಜು, ಕೆಂಡಗಣ್ಣಸ್ವಾಮಿ, ಪವರ್‌ಚಂದ್, ಸೋಮಶೇಖರ್, ಸುರೇಶ್, ಹೇಮಂತ್ ಕುಮಾರ್, ಪ್ರವೀಣ್, ಹೊನ್ನೆಗೌಡ, ಶಿವಕುಮಾರ್, ಸಿಸ್ಟರ್ ಮರಿಯಾ ಕೀರ್ತನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net