ಕುಡಿಯುವ ನೀರು ಸರಬರಾಜಿಗೆ ಚಾಲನೆ

29blrp3
Published on

ಬೇಲೂರು: ಪೇಟೆ ಶ್ರೀಕನ್ಯಕಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಈ ಭಾಗದ ಜನರಿಗೆ ಅವಶ್ಯಕವಾಗಿ ಬೇಕಿದ್ದ ಕುಡಿಯುವ ನೀರು ಪೂರೈಕೆಗಾಗಿ ಕೊರೆಯಲಾಗಿದ್ದ ನೂತನ ಕೊಳವೆ ಬಾವಿಯಿಂದ ವಾರ್ಡಿನ ಜನರಿಗೆ ನೀರು ಸರಬರಾಜಿಗೆ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಗುರುವಾರ ಚಾಲನೆ ನೀಡಿದರು.


ನಂತರ ಮಾತನಾಡಿ, ಕಳೆದ ಸಾಲಿನಲ್ಲಿ ನಗರ ವ್ಯಾಪ್ತಿಗಾಗಿ ವಾಟರ್ ಸಪ್ಲೆ ಅನುದಾನದಲ್ಲಿ ಬಂದಿದ್ದ 10 ಲಕ್ಷ ರೂ, ಅನುದಾನದಲ್ಲಿ ಗಾಣಿಗರ ಬೀದಿ, ಜೈಭೀಮ್ ಬೀದಿ ಮತ್ತು ಕನ್ಯಕಾಪರಮೇಶ್ವರಿ ದೇಗುಲ ಆವರಣ ಕೊಳವೆ ಬಾವಿ ತೆಗೆಸಿ ಆಯಾ ಭಾಗದ ನಾಗರಿಕರಿಗೆ ನೀರು ಪೂರೈಸಲು ಕೊಳವೆ ಬಾವಿಗೆ ಕೊರೆಸಿ ಚಾಲನೆ ನೀಡುತಿದ್ದೇವೆ. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹಾಗೂ ವಾರ್ಡಿನ ಅಭಿವೃದ್ಧಿ ಹಾಗೂ ದೇಗುಲಕ್ಕೆ ಬೇಕಾದ ಮೂಲ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುವುದು ಎಂದರು.


ಪುರಸಭೆ ಮುಖ್ಯಾಧಿಕಾರಿ ಸುಜಯ್‌ಕುಮಾರ್ ಮಾತನಾಡಿ, ಕಳೆದ ಡಿಸೆಂಬರ್‌ನಲ್ಲಿ ಅನುದಾನ ಮಂಜೂರಾಗಿತ್ತು. ಈ ಸಂದರ್ಭ ಈ ವಾರ್ಡಿನ ಕುಡಿಯುವ ನೀರಿನ ಸಮಸ್ಯೆ ಅರಿತು ಸದಸ್ಯ ಜಮಾಲೂದ್ದೀನ್ ಕೊಳವೆ ಬಾವಿಯನ್ನು ಕೊರೆಯಿಸಿ ಅನುಕೂಲ ಕಲ್ಪಿಸಿದ್ದಾರೆ. ಇದರ ಸದುಪಯೋಗವನ್ನು ನಾಗರಿಕರು ಪಡೆದು ಕೊಳ್ಳಬೇಕು ಎಂದರು.


ಪುರಸಭೆ ಸದಸ್ಯ ಜಮಾಲೂದ್ದೀನ್ ಮಾತನಾಡಿ, ಈ 5ನೇ ವಾರ್ಡಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿತ್ತು. ಇದನ್ನು ಮನಗಂಡು ನಾಗರಿಕರ ಆಶಯದಂತೆ ಪುರಸಭೆ ಅನುದಾನದಲ್ಲಿ ಕನ್ಯಕಾಪರಮೇಶ್ವರಿ ದೇಗುಲದ ಆವರಣದಲ್ಲಿ ಕೊಳವೆ ಬಾವಿ ತೆಗೆಸಲು ಅವಕಾಶ ಸಿಕ್ಕಿತು. ಆದರೆ ಕೊಳವೆ ಬಾವಿ ಕೊರೆಸಿದರೆ ಇಲ್ಲಿ ಉತ್ತಮವಾಗಿ ನೀರು ಸಿಕ್ಕಿದೆ. ಈ ನೀರನ್ನು ವಾರ್ಡಿನ ಮತ್ತು ದೇಗುಲಕ್ಕೆ ಅನುಕೂಲವಾಗುವಂತೆ ನೀರು ಕೊಡಲಾಗುವುದು. ಮುಂದಿನ ದಿನಗಳಲ್ಲಿ ಈ ವಾರ್ಡಿಗೆ ಹೆಚ್ಚಿನ ಅಭಿವೃದ್ಧಿ ಕೆಲಸಗಳೊಂದಿಗೆ ಭೂತ ಸೌಲಭ್ಯ ಕಲ್ಪಿಸಿ ಕೊಡಲು ಕೆಲಸ ಮಾಡಲಿದ್ದೇನೆ ಎಂದರು.


ಪುರಸಭೆ ಉಪಾಧ್ಯಕ್ಷೆ ಉಷಾ, ಸದಸ್ಯರಾದ ಜಗದೀಶ್, ಪ್ರಭಾಕರ್, ಶ್ರೀಕನ್ಯಕಾಪರಮೇಶ್ವರಿ ದೇವಸ್ಥಾನ ಪೇಟೆ ಸಂಘದ ಅಧ್ಯಕ್ಷ ಗೋವಿಂದರಾಜು, ನಿರ್ದೇಶಕ ಕೃಷ್ಣಮೂರ್ತಿ, ಮಂಜುನಾಥ್, ಅಶೋಕ್, ಸುಧೀಂದ್ರ, ವಿಷ್ಣು ಕುಮಾರ್, ವನೀತಾ ಸಂಘದ ಅಧ್ಯಕ್ಷೆ ಪ್ರತಿಮಾ ರಘುನಂದನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net