220 ಹಳ್ಳಿಗಳಿಗೆ ಕುಡಿಯುವ ನೀರಿನ ಫಿಲ್ಟರ್

ಚಿಂತಾಮಣಿ ತಾಲೂಕಿನ ಆಲಂಬಗಿರಿ ಗ್ರಾಮದ ಕಲ್ಯಾಣಿ ಜೀರ್ಣೋದ್ಧಾರಕ್ಕೆ ಸಚಿವ ಎಂ.ಸಿ.ಸುಧಾಕರ್ ಭೂಮಿಪೂಜೆ ನೆರವೇರಿಸಿದರು. ಜಿಲ್ಲಾ ಪಂಚಾಯಿಸಿ ಮಾಜಿ ಸದಸ್ಯ ಶಿವಣ್ಣ, ಕೆಪಿಸಿಸಿ ಸದಸ್ಯ ಕೃಷ್ಣ ಮೂರ್ತಿ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕರಾದ ನಾಗಿರೆಡ್ಡಿ, ಮುನಗನಹಳ್ಳಿ ಗ್ರಾಪಂ ಅಧ್ಯಕ್ಷ ಶಂಶಿಯಾ ತಾಜ್, ಉಪಾಧ್ಯಕ್ಷ ವೆಂಕಟರಾಮರೆಡ್ಡಿ, ಮಾಜಿ ಅಧ್ಯಕ್ಷ ವೆಂಕಟರತ್ನಮ್ಮ ಶ್ರೀನಿವಾಸ್ ಇದ್ದರು.
1
ಚಿಂತಾಮಣಿ ತಾಲೂಕಿನ ಆಲಂಬಗಿರಿ ಗ್ರಾಮದ ಕಲ್ಯಾಣಿ ಜೀರ್ಣೋದ್ಧಾರಕ್ಕೆ ಸಚಿವ ಎಂ.ಸಿ.ಸುಧಾಕರ್ ಭೂಮಿಪೂಜೆ ನೆರವೇರಿಸಿದರು. ಜಿಲ್ಲಾ ಪಂಚಾಯಿಸಿ ಮಾಜಿ ಸದಸ್ಯ ಶಿವಣ್ಣ, ಕೆಪಿಸಿಸಿ ಸದಸ್ಯ ಕೃಷ್ಣ ಮೂರ್ತಿ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕರಾದ ನಾಗಿರೆಡ್ಡಿ, ಮುನಗನಹಳ್ಳಿ ಗ್ರಾಪಂ ಅಧ್ಯಕ್ಷ ಶಂಶಿಯಾ ತಾಜ್, ಉಪಾಧ್ಯಕ್ಷ ವೆಂಕಟರಾಮರೆಡ್ಡಿ, ಮಾಜಿ ಅಧ್ಯಕ್ಷ ವೆಂಕಟರತ್ನಮ್ಮ ಶ್ರೀನಿವಾಸ್ ಇದ್ದರು.
Published on

ಸಚಿವ ಡಾ.ಎಂ.ಸಿ.ಸುಧಾಕರ್ ಮಾಹಿತಿ ಆಲಂಬಗಿರಿ ಪುರಾತನ ಕಲ್ಯಾಣಿಯ ಪುನಶ್ಚೇತನಕ್ಕೆ ಚಾಲನೆ



ಚಿಂತಾಮಣಿ : ತಾಲೂಕಿನ 220 ಹಳ್ಳಿಗೆ ಕುಡಿಯುವ ನೀರಿನ ಫಿಲ್ಟರ್‌ಗಳನ್ನು ಅಳವಡಿಸುವ ಯೋಜನೆ ರೂಪಿಸಲಾಗಿದ್ದು, ಈಗಾಗಲೇ 35ಕ್ಕೂ ಹೆಚ್ಚು ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ತಾಲೂಕಿನ ಇತಿಹಾಸ ಪ್ರಸಿದ್ಧ ಆಲಂಬಗಿರಿ ಪುರಾತನ ಕಲ್ಯಾಣಿಯ ಅಭಿವೃದ್ಧಿಗೆ 37ಲಕ್ಷ ವೆಚ್ಚದ ಕಾಮಗಾರಿಗೆ ಉನ್ನತ ಶಿಕ್ಷಣ ಸಚಿವರೂ ಆದ ಚಿಕ್ಕಬಳ್ಳಾಪುರ ಜಿಲ್ಲಾ ಸಚಿವ ಡಾ.ಎಂ.ಸಿ.ಸುಧಾಕರ್ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು. ಕಲ್ಯಾಣಿಗಳ ಅಭಿವೃದ್ಧಿಯಿಂದ ಅಂತರ್ಜಲದ ಮಟ್ಟ ಏರಿಕೆಯಾಗುತ್ತದೆ. ಆ ಮೂಲಕ ಬೋರ್‌ವೆಲ್‌ಗಳಲ್ಲಿ ನೀರು ಮರುಪೂರಣವಾಗುತ್ತದೆ ಎಂದರು.
ಕೇವಲ ಸರ್ಕಾರದಿಂದ ಎಲ್ಲ ಕಾರ್ಯಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ. ಇದರೊಂದಿಗೆ ವಿವಿಧ ವರ್ಗಗಳ ಸಂಘ-ಸಂಸ್ಥೆಗಳ, ಸಾರ್ವಜನಿಕ ಸಹಕಾರದೊಂದಿಗೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಅನುದಾನಗಳೊಂದಿಗೆ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ. 2 ಕೋಟಿ ರೂ. ಶಾಸಕರ ಅನುದಾನದಲ್ಲಿ 200 ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ನೀಡುವುದು ಹಾಗೂ 200 ಕಿಮೀ ಉದ್ದದ ಗ್ರಾಮಾಂತರ ರಸ್ತೆಗಳನ್ನು ಮಾಡಿಸುವ ಭರವಸೆ ನೀಡಿದರು. ಡೇರಿ ವೆಂಕಟೇಶ್, ಡೇರಿ ಅಶೋಕ್, ಹರಿ, ಕೈವಾರ ಅಂಬರೀಷ್, ಮಾವಿಕೆರೆ ರವಿಚಂದ್ರ, ಮಾಡಿಕೆರೆ ಮಣಿ, ನಟೇಶ್, ಮುನಿನಾರಾಯಣ, ಚಿನ್ನಸಂದ್ರ ನಾರಾಯಣಸ್ವಾಮಿ ಇದ್ದರು.

ಸಂಸದರಿಗೆ ಮಾಹಿತಿ ಕೊರತೆ
ಸಂಸದ ಕೆ.ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಡಾ.ಎಂ.ಸಿ.ಸುಧಾಕರ್, ಸಂಸದರಿಗೆ ಮಾಹಿತಿ ಕೊರತೆ ಇದೆ. 3-4 ವರ್ಷ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾಗ ಕೆಲ ಯೋಜನೆಗಳನ್ನು ತಾವೇ ಮಂಜೂರು ಮಾಡಿಸಿಕೊಂಡು ಬಂದಿದ್ದಾಗಿ ಈಗ ಹೇಳಿಕೊಳ್ಳುತ್ತಿದ್ದಾರೆ. 50 ಹಾಸಿಗೆ ಸಾಮರ್ಥ್ಯದ ಐಸಿಯು ಘಟಕವನ್ನು ಚಿಂತಾಮಣಿಗೆ ತೆಗೆದುಕೊಂಡು ಹೋಗಿದ್ದಾರೆಂದೂ ಸಂಸದರು ಆರೋಪಿಸುತ್ತಿದ್ದು, ಇದರಲ್ಲಿ ಒಂದಿಷ್ಟೂ ಹುರಳಿಲ್ಲ. ಡಾ.ಎಂ.ಸಿ.ಸುಧಾಕರ್ ಅವರೇ, ಪೇರೆಸಂದ್ರದಲ್ಲಿ ಯಾವ ಕಾರಣಕ್ಕೆ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಿದ್ದೀರಾ? ಎಂದು ಸಚಿವ ಎಂ.ಸಿ.ಸುಧಾಕರ್ ಪ್ರಶ್ನಿಸಿದರು.

ಅನುದಾನಕ್ಕೆ ಪ್ರಸ್ತಾವ
ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆಗೆ 8 ಕೋಟಿ ರೂ. ಚಿಕ್ಕಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಗೆ 20 ಕೋಟಿ ರೂಪಾಯಿ ಅನುದಾನಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಬಳಿ ಕೇಳಿದ್ದು, ನೀಡುವ ಭರವಸೆ ನೀಡಿದ್ದಾರೆ. ಇದರ ಜತೆಗೆ ಚಿಕ್ಕಬಳ್ಳಾಪುರ ಆಸ್ಪತ್ರೆಯ 3ನೇ ಮತ್ತು 4ನೇ ಅಂತಸ್ಥಿಗೆ 20 ಕೋಟಿ ರೂ.ಗೆ ಪ್ರಸ್ತಾವ ಸಲ್ಲಿಸಿರುವುದಾಗಿ ಸಚಿವ ಸುಧಾಕರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net