ನೆರೆ ಹಾನಿ ಹೊಳೆ ಹೂಳೆತ್ತುವಂತೆ ಮನವಿ

laxmi
ಕೋಟ ಹೋಬಳಿ ಭಾಗದ ನೆರೆ ಹಾನಿ ಹೊಳೆ ಹೂಳೆತ್ತುವಂತೆ ಕೋಟ ರೈತಧ್ವನಿ ಸಂಘಟನೆಯಿಂದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿ ಮಾಡಿದರು
Published on

ಕೋಟ: ಕೋಟದ ರೈತಧ್ವನಿ ಸಂಘ ನೇತೃತ್ವದಲ್ಲಿ ಕುಂದಾಪುರ ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ ಉಪಸ್ಥಿತಿಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮ್ಮೀ ಹೆಬ್ಬಾಳ್ಕರ್ ಅವರನ್ನು ಮಣೂರು, ತೆಕ್ಕಟ್ಟೆ, ಗಿಳಿಯಾರು, ಚಿತ್ರಪಾಡಿ, ಕಾರ್ಕಡ ಭಾಗದ ರೈತರು ಭೇಟಿಯಾಗಿ ನೆರೆ ಸಮಸ್ಯೆ, ಬೆಳೆ ಹಾನಿ ಬಗ್ಗೆ ಮನವಿ ನೀಡಿದರು.

ರೈತ ಸಂಘದ ಜಯರಾಮ್ ಶೆಟ್ಟಿ, ಟಿ.ಮಂಜುನಾಥ್ ಗಿಳಿಯಾರ್, ಮಣೂರು ಭಾಸ್ಕರ್ ಶೆಟ್ಟಿ, ಹರ್ತಟ್ಟು ತಿಮ್ಮ ಕಾಂಚನ್, ಮಹೇಶ್ ಶೆಟ್ಟಿ, ಜಿ.ತಿಮ್ಮ ಪೂಜಾರಿ, ನಾಗರಾಜ ಗಾಣಿಗ ಸಾಲಿಗ್ರಾಮ, ರಮೇಶ್ ಮೆಂಡನ್, ಸುಭಾಷ್ ಶೆಟ್ಟಿ, ಶ್ರೀಧರ ಪಿ.ಎಸ್., ಶರಣ್ಯಯ್ಯ ಹಿರೇಮಠ್ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net